ಪುತ್ತಿಗೆಯಲ್ಲಿ ಬಸ್ ತಂಗುದಾಣದ  ಕೊರತೆ: ಪ್ರಯಾಣಿಕರಿಗೆ ಸಮಸ್ಯೆ

ಪುತ್ತಿಗೆ: ಪುತ್ತಿಗೆ ಪಂಚಾಯತ್‌ನ ಪ್ರಧಾನ ಕೇಂದ್ರಗಳಲ್ಲಿ ಒಂದಾದ ಪುತ್ತಿಗೆಯಲ್ಲಿ ಬಸ್ ತಂಗುದಾಣದ ಕೊರತೆ ಪ್ರಯಾಣಿಕರು, ಸ್ಥಳೀಯರಿಗೆ ಸಮಸ್ಯೆ ಉಂಟುಮಾಡುತ್ತಿದೆ. ಪುತ್ತಿಗೆಯಿಂದ ಸೀತಾಂಗೋಳಿ ಭಾಗಕ್ಕೆ ಸಂಚರಿಸುವವರು ಬಸ್‌ಗಾಗಿ ಕಾಯುವ ಸ್ಥಳದಲ್ಲಿ ಬಸ್ ತಂಗುದಾಣವಿಲ್ಲದಿರುವುದು ಇಲ್ಲಿನವರಿಗೆ ಸಮಸ್ಯೆ ಉಂಟುಮಾಡಿದೆ. ಹಲವು ವರ್ಷದಿಂದ ಇಲ್ಲಿ ಮಳೆ, ಬಿಸಿಲಿಗೆ ಜನರು ರಸ್ತೆ ಬದಿಯೇ ನಿಲ್ಲಬೇಕಾಗುತ್ತಿದೆ. ಇಲ್ಲದಿದ್ದರೆ ಪೆರ್ಲ ಭಾಗಕ್ಕೆ ತೆರಳುವ ಬಸ್‌ಗಳು ನಿಲ್ಲುವಲ್ಲಿ ಇರುವ ಬಸ್ ತಂಗುದಾಣವನ್ನು ಆಶ್ರಯಿಸಬೇಕಾಗುತ್ತಿದೆ. ಆದರೆ ಈ ತಂಗುದಾಣದಲ್ಲಿ ನಿಂತು ಬಸ್ ಬರುವಾಗ ಆಚೆ ಬದಿಗೆ ಓಡಬೇಕಾಗುತ್ತಿದ್ದು, ಇದು ಅಪಘಾತಕ್ಕೆ ಕಾರಣವಾಗ ಬಹುದಾಗಿದೆ. ಪಕ್ಕನೆ ಬಸ್ ಬಂತೆಂದು ಆಚೆ ನೋಡದೆ ದಾಟಿದರೆ ಇನ್ನೊಂದು ವಾಹನ ಢಿಕ್ಕಿ ಹೊಡೆಯುವ ಸಾಧ್ಯತೆ ಇದೆ. ಮಕ್ಕಳಾದರೆ ಇದು ಇನ್ನಷ್ಟು ತೊಂದರೆಯಾಗಲಿದೆ.

ಈ ಹಿನ್ನೆಲೆಯಲ್ಲಿ ಪುತ್ತಿಗೆಯಲ್ಲಿ ಸೀತಾಂಗೋಳಿ ಭಾಗಕ್ಕೆ ತೆರಳುವ ಬಸ್‌ಗಳು ನಿಲ್ಲುವ ಸ್ಥಳದಲ್ಲಿ  ಬಸ್ ತಂಗುದಾಣವನ್ನು ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

You cannot copy contents of this page