ಪುತ್ರನ ಮೇಲೆ ದ್ವೇಷ: ಅಂಗಡಿಯಲ್ಲಿ ಗಾಂಜಾ ತಂದಿಟ್ಟ ತಂದೆ

ಕಲ್ಪೆಟ್ಟ: ಪುತ್ರನ ಮೇಲೆ ಇದ್ದ ದ್ವೇಷವನ್ನು ಸಾಧಿಸಲು ಅಂಗಡಿಯಲ್ಲಿ 2 ಕಿಲೋ ಗಾಂಜಾ  ತಂದಿಟ್ಟ ತಂದೆ ಸೆರೆಯಾಗಿದ್ದಾನೆ. ಮಾನಂತವಾಡಿ ಚೆಟ್ಟಪ್ಪಾಲಂ ವೇಮಂ ಪುತ್ತನ್ ತರವಾಟಿಲ್ ನಿವಾಸಿ ಅಬೂಬಕ್ಕರ್ (67)ನನ್ನು ಅಬಕಾರಿ ತಂಡ ಬಂಧಿಸಿದೆ. ಪುತ್ರ ನೌಫಲ್‌ನ ಮಾಲಕತ್ವದ ಮಾನಂತವಾಡಿ ಪೇಟೆಯಲ್ಲಿರುವ ಪಿ.ಎ. ಬನಾನ ಎಂಬ ಅಂಗಡಿಯಲ್ಲಿ ಅಬೂಬಕ್ಕರ್ ಗೆಳೆಯರ ಸಹಕಾರದೊಂದಿಗೆ ಎರಡು ಕಿಲೋ ಗಾಂಜಾವನ್ನು ತಂದಿರಿಸಿದ್ದನು. ನೌಫಲ್ ಮಸೀದಿಗೆ ಹೋದ ಸಮಯದಲ್ಲಿ ಗೆಳೆಯರಾದ ಔತ್ತ, ಜಿನ್ಸ್‌ವರ್ಗೀಸ್ ಎಂಬಿವರ ಸಹಾಯದೊಂದಿಗೆ ಗಾಂಜಾವನ್ನು ತಂದಿರಿಸಲಾಗಿದೆ. ಈ ವಿಷಯ ಅಬೂಬಕ್ಕರ್‌ನ ಸಹಾಯಕರು ಅಬಕಾರಿ ದಳಕ್ಕೆ ತಿಳಿಸಿದ್ದರು. ಅವರು ಬಂದು ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮಾಲಕ ನೌಫಲ್‌ನನ್ನು ಸೆರೆ ಹಿಡಿದಿ ದ್ದಾರೆ. ಈ ವೇಳೆ ತನ್ನನ್ನು ಸಿಲುಕಿಸಲು ಯಾರೋ ಗಾಂಜಾ ತಂದಿರಿಸಿರ ಬೇಕೆಂದು ಅವರು ಹೇಳಿಕೆ ನೀಡಿದ್ದರು. ಬಳಿಕ ನಡೆಸಿದ ಸಿಸಿಟಿವಿ ತಪಾಸಣೆ ಯಲ್ಲಿ ಆರೋಪಿಯ ಪತ್ತೆಯಾಗಿದೆ.

You cannot copy contents of this page