ಪೆಟ್ರೋಲ್ ಪಂಪ್ ಟ್ಯಾಂಕ್ ಸ್ಥಾಪಿಸಲು ತೋಡಿದ ಹೊಂಡದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಕಾಸರಗೋಡು: ಪೆರಿಯ ನವೋದ ಯನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಪೆಟ್ರೋಲ್ ಪಂಪ್‌ನ ಟ್ಯಾಂಕ್ ಸ್ಥಾಪಿಸಲು ತೋಡಿದ ಹೊಂಡದಲ್ಲಿ  ವ್ಯಕ್ತಿಯೊಬ್ಬರು ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ವೇಳೆ  ಮೃತದೇಹ ಪತ್ತೆಯಾಗಿದ್ದು, ಆದರೆ  ವ್ಯಕ್ತಿಯ ಗುರುತು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.  ಮೃತದೇಹವನ್ನು ಸಮಗ್ರ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾ ಗಿದೆ.  ಹೊಂಡದಿಂದ ದುರ್ನಾತ ಬೀರತೊಡಗಿದ ಹಿನ್ನೆಲೆಯಲ್ಲಿ ಸಮೀಪದ ಮನೆಗಳ ಮಕ್ಕಳು ಅಲ್ಲಿಗೆ ತೆರಳಿ ನೋಡಿದಾಗ ಮೃತದೇಹ ಕಂಡುಬಂದಿತ್ತು. ಮೃತದೇಹ ಜೀರ್ಣಿಸಿದ ಸ್ಥಿತಿಯಲ್ಲಿದ್ದು ಮೂರು ದಿನಗಳ ಹಿಂದೆ ಸಾವಿಗೀಡಾ ಗಿರಬ ಹುದೆಂದು ಅಂದಾಜಿಸಲಾಗಿದೆ.  ವಿಷಯ ತಿಳಿದು ಬೇಕಲ ಪೊಲೀಸರು, ಶ್ವಾನದಳ ತಲುಪಿ ಪರಿಶೀಲನೆ ನಡೆಸಿದರು.

You cannot copy contents of this page