ಬದಿಯಡ್ಕ: ಪೆರಡಾಲ ಮಕ್ಕಿಕಾನ ನಿವಾಸಿ ವೆಂಕಟಕೃಷ್ಣ ಭಟ್ (68) ನಿಧನ ಹೊಂದಿದರು. ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಇವರು ಕಾಸರಗೋಡು ವಿದ್ಯಾನಗರ ಕೈಗಾರಿಕಾ ಎಸ್ಟೇಟ್ನಲ್ಲಿ ಜೇಸ್ತ ಟೆಕ್ನೋಕ್ರಾಫ್ಟ್ನ ಮಾಲಕನಾಗಿದ್ದರು.
ನಿವೃತ್ತ ಮುಖ್ಯೋಪಾಧ್ಯಾಯ ದಿ| ಗೋವಿಂದ ಭಟ್ರ ಪುತ್ರನಾದ ಮೃತರು ತಾಯಿ ಲೀಲಾವತಿ, ಪುತ್ರ ಅಕ್ಷಯ ಗೋವಿಂದ್, ಸಹೋದರಿಯರಾದ ದೇವಕಿದೇವಿ, ಈಶ್ವರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ವೆಂಕಟಕೃಷ್ಣ ಭಟ್ರ ಪತ್ನಿ ರಂಜಿನಿ ಈ ಹಿಂದೆ ನಿಧನ ಹೊಂದಿದ್ದಾರೆ.
ವೆಂಕಟಕೃಷ್ಣ ಭಟ್ರ ನಿಧನಕ್ಕೆ ಕೇರಳ ಕಿರು ಕೈಗಾರಿಕಾ ಫೆಡರೇಶನ್ (ಕೆಎಸ್ಎಸ್ಐಎಫ್) ಜಿಲ್ಲಾ ಸಮಿತಿ ಸಂತಾಪ ಸೂಚಿಸಿದೆ. ಜಿಲ್ಲಾಧ್ಯಕ್ಷ ಸಿ.ಎಚ್. ಚಂದ್ರಶೇಖರನ್, ಉಪಾಧ್ಯಕ್ಷ ಅನ್ವರ್ ಕೆ, ಕಾರ್ಯದರ್ಶಿ ಪ್ರಕಾಶ್ಚಂದ್ರ, ಜತೆ ಕಾರ್ಯದರ್ಶಿ ಅಶೋಕನ್, ಕೋಶಾಧಿಕಾರಿ ಅನಿಲ್ ಕುಮಾರ್, ಎಸ್. ಸುರೇಂದ್ರನ್, ಮುಹಮ್ಮದ್ ಅಶ್ರಫ್, ಶಾಜಿ, ಮಣಿಕಂಠನ್, ಸತೀಶನ್ ಮೊದಲಾದವರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು. ವಿದ್ಯಾನಗರ ಕೈಗಾರಿಕಾ ಎಸ್ಟೇಟ್ನಲ್ಲಿ ೩೬ ವರ್ಷಗಳಿಂದ ಜೇಸ್ತ ಕೈಗಾರಿಕಾ ಘಟಕ ಕಾರ್ಯಾಚರಿಸುತ್ತಿದೆ.







