ಪೆರಿಯ ಕೇಂದ್ರೀಯ ವಿ.ವಿ. ಸಮೀಪ ಚಿರತೆ ಪತ್ತೆ
ಕಾಸರಗೋಡು: ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯ ಸಮೀಪ ಚಿರತೆ ಪತ್ತೆಯಾಗಿರುವುದಾಗಿ ವರದಿಯಾಗಿದೆ. ನಿನ್ನೆ ರಾತ್ರಿ 8.40 ರ ವೇಳೆ ಚಾಲಿಂಗಾಲ್ ಮೊಟ್ಟ ಎಂಬಲ್ಲಿ ವಾಹನದಲ್ಲಿ ಸಂಚರಿಸುತ್ತಿದ್ದವರು ಚಿರತೆಯನ್ನು ಕಂಡಿರುವುದಾಗಿ ಹೇಳಲಾಗುತ್ತಿದೆ. ಈ ವಿಷಯವನ್ನು ಅವರು ಕೂಡಲೇ ಸ್ಥಳೀಯರಲ್ಲಿ ತಿಳಿಸಿದ್ದಾರೆ. ರಸ್ತೆಗೆ ಅಡ್ಡವಾಗಿ ಓಡಿದ ಚಿರತೆ ಬಳಿಕ ಎಲ್ಲಿಗೆ ಹೋಯಿತೆಂದು ತಿಳಿದು ಬಂದಿಲ್ಲ. ಕೆಲವು ದಿನಗಳ ಹಿಂದೆ ಅಂಬಲತ್ತರ ಸಮೀಪ ತಟ್ಟುಮ್ಮಲ್ ಹಾಗೂ ಮೀಂಙೋತ್ ಎಂಬೆಡೆಗಳಲ್ಲಿ ಚಿರತೆ ಕಾಣಿಸಿಕೊಂಡಿತ್ತು.
ಚಾಲಿಂಗಾಲ್ ರಾಷ್ಟ್ರೀಯ ಹೆದ್ದಾರಿಯಿಂದ ಅಲ್ಪವೇ ದೂರದಲ್ಲಿ ಇದೀಗ ಚಿರತೆ ಕಾಣಿಸಿದೆ. ಆದ್ದರಿಂದ ಚಾಲಿಂಗಾಲ್‌ನಲ್ಲಿ ಕಂಡ ಚಿರತೆಯೇ ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯ ಸಮೀಪ ಕಾಣಿಸಿರಬಹುದೆಂದು ಸಂಶಯಿಸಲಾಗುತ್ತಿದೆ. ಕೇಂದ್ರೀಯ ವಿಶ್ವ ವಿದ್ಯಾಲಯ ಸಮೀಪ ಪ್ಲಾಂಟೇಶನ್ ಕಾರ್ಪೊರೇಶನ್‌ನ ಗೇರು ತೋಟವಿದೆ. ಇಲ್ಲಿ ನೂರಾರು ಕಾಡು ಹಂದಿಗಳು ಕೂಡಾ ವಾಸಿಸುತ್ತಿವೆ ಎಂದು ಹೇಳಲಾಗುತ್ತಿದೆ.