ಪೆರ್ಲದಲ್ಲಿ ಕಾಡು ಹಂದಿ ಆಕ್ರಮಣದಿಂದ ಸೂಪರ್‌ವೈಸರ್‌ಗೆ ಗಾಯ

ಪೆರ್ಲ: ಕಾಡು ಹಂದಿ ಆಕ್ರ ಮಣದಿಂದಸೂಪರ್‌ವೈಸರ್ ಗಾಯ ಗೊಂಡಿದ್ದಾರೆ. ಕಾಟುಕುಕ್ಕೆ ನಿವಾಸಿ ಕುಂಞಿರಾಮ (58) ಗಾಯಗೊಂ ಡವರು. ನಿನ್ನೆ ಬೆಳಿಗ್ಗೆ ಇವರಿಗೆ ಕಾಡು ಹಂದಿ ಆಕ್ರಮಿಸಿದೆ. ತೋಟದ ಸೂಪರ್‌ವೈಸರ್ ಆಗಿದ್ದ ಇವರು ನೀರು ಬಿಡಲೆಂದು ನಿನ್ನೆ ಬೆಳಿಗ್ಗೆ ತೆರಳು ತ್ತಿದ್ದಾಗ ಕಾಡು ಹಂದಿ ಆಕ್ರಮಿಸಿ ರುವುದಾಗಿ ತಿಳಿಸಿದ್ದಾರೆ. ಕಿವಿಗೆ ಹಾಗೂ ತಲೆ, ಕೈಕಾಲುಗಳಿಗೆ ಗಾಯ ಉಂಟಾ ಗಿದ್ದು, ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.

You cannot copy contents of this page