ಪೈವಳಿಕೆ ಪಂ. ನಲ್ಲಿ ಸ್ವಜನಪಕ್ಷಪಾತ ಸಭೆ ಬಹಿಷ್ಕರಿಸಿ ಬಿಜೆಪಿ ಪ್ರತಿಭಟನೆ
ಪೈವಳಿಕೆ: ಪಂಚಾಯತ್‌ನಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ನಡೆಯುತ್ತಿದೆಯೆಂದು ಆರೋಪಿಸಿ, ಪಂಚಾಯತ್‌ನಲ್ಲಿ ನೌಕರರ ಕೊರತೆ ನೀಗಿಸಬೇಕೆಂದು ಆಗ್ರಹಿಸಿ ಬಿಜೆಪಿ ಜನ ಪ್ರತಿನಿಧಿಗಳು ನಿನ್ನೆ ನಡೆಯಬೇಕಾಗಿದ್ದ ಬೋರ್ಡ್ ಮೀಟಿಂಗ್ ಬಹಿಷ್ಕರಿಸಿ ಪ್ರತಿಭಟಿಸಿದರು. ಬೀದಿ ದೀಪ ಸ್ಥಾಪಿಸಲು ಮೀಸಲಿರಿಸಿದ್ದ ಸುಮಾರು 32 ಲಕ್ಷ ರೂ.ಗಳನ್ನು ಫೈನಾನ್ಸ್ ಸಮಿತಿಯ ಗಮನಕ್ಕೆ ಬಾರದೆ ಗುತ್ತಿಗೆದಾರನಿಗೆ ನೀಡಿ ಭ್ರಷ್ಟಾಚಾರ ನಡೆಸಿರುವುದಾಗಿ ಬಿಜೆಪಿ ಪ್ರತಿನಿಧಿಗಳು ಆರೋಪಿಸಿದರು. ಎ.ಇ, ಕ್ಲಾರ್ಕ್‌ಗಳ ಕೊರತೆ ಪಂಚಾಯತ್ ನಲ್ಲಿದ್ದು, ಇವರ ನೇಮಕಾತಿ ಕೂಡಲೇ ನಡೆಸಬೇಕೆಂದು ಅವರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷ ಮಣಿಕಂಠ ರೈ, ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ಮುಖಂಡರಾದ ಲೋಕೇಶ್ ನೋಂಡ, ಸದಾಶಿವ ಚೇರಾಲ್, ಪ್ರವೀಣ್‌ಚಂದ್ರ ಬಲ್ಲಾಳ್, ಸತ್ಯಶಂಕರ ಭಟ್, ಕೀರ್ತಿ ಭಟ್ ಭಾಗವಹಿಸಿದರು.