ಪೈವಳಿಕೆ ಪಂಚಾಯತ್ ಆಡಳಿತ ಬೇಜವಾಬ್ದಾರಿ- ಬಿಜೆಪಿ
ಪೈವಳಿಕೆ: ಪೈವಳಿಕೆ ಪಂಚಾಯತ್ ಆಡಳಿತ ಸಮಿತಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಅಭಿವೃದ್ಧಿಗೆ ಬೇಕಾದ ಯಾವುದೇ ಯೋಜನೆಗಳು ಜ್ಯಾರಿಯಾ ಗುತ್ತಿಲ್ಲ. ಪರಿಶಿಷ್ಟ ಪಂಗಡದವರು ಹೆಚ್ಚು ವಾಸವಿರುವ ಪ್ರದೇಶದಲ್ಲಿ ಮೂಲ ಭೂತ ಸೌಕರ್ಯ ಒದಗಿಸಲು ಆಡಳಿತ ಗಮನ ನೀಡಿಲ್ಲ. ಮನೆ ನಿರ್ಮಾಣ, ರಸ್ತೆ ರಿಪೇರಿ, ಮನೆ ರಿಪೇರಿಗೆ ಕ್ರಮವುಂಟಾಗಿಲ್ಲ ಎಂದು ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ.
ದಾರಿದೀಪ ವ್ಯವಸ್ಥೆ ಉಪಯೋಗಶೂನ್ಯವಾಗಿದೆ. ಭರವಸೆ ಪಾಲಿಸದ ಕಂಪೆನಿ ವಿರುದ್ಧ ಕ್ರಮ ಜರಗಿಸದ ಆಡಳಿತ ಸಮಿತಿಯ ವಿರುದ್ಧ ಬಿಜೆಪಿ ಕಾರ್ಯದರ್ಶಿಗೆ ದೂರು ನೀಡಿದೆ. ರಸ್ತೆ ಮತ್ತಿತರ ಕಾಮಗಾರಿ ಟೆಂಡರ್ ಕೂಡಲೇ ಜ್ಯಾರಿ ಮಾಡುವಂತೆ ಬಿಜೆಪಿ ಆಗ್ರಹಿಸಿದೆ. ಸಭೆಯಲ್ಲಿ ಮುಖಂಡರಾದ ಜಯಲಕ್ಷ್ಮಿ ಭಟ್, ಮಣಿಕಂಠ ರೈ, ಪ್ರಸಾದ್ ರೈ, ಲೋಕೇಶ್ ನೋಂಡ, ವಿಘ್ನೇಶ್ವರ್ ಮಾಸ್ತರ್, ಸದಾಶಿವ ಚೇರಾಲ್, ಪುಷ್ಪಲಕ್ಷ್ಮಿ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.