ಪೊದೆಯಲ್ಲಿ ಬಚ್ಚಿಟ್ಟ 95 ಲೀಟರ್ ಹುಳಿರಸ ಪತ್ತೆ

ಕಾಸರಗೋಡು:  ವೆಳ್ಳರಿಕುಂಡು ಚಾಲಿಂಡೆಕರದ ಪೊದೆಯಲ್ಲಿ ಐದು ಪಾತ್ರೆಗಳಲ್ಲಾಗಿ ತುಂಬಿಸಿಟ್ಟ ೯೫ ಲೀಟರ್ ಹುಳಿರಸ (ವಾಶ್)ನ್ನು ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಇನ್‌ಸ್ಪೆಕ್ಟರ್-ಗ್ರೇಡ್  ಕೆ.ವಿ. ಮುರಳಿ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ. ಈ ಬಗ್ಗೆ ನೀಲೇಶ್ವರ ರೇಂಜ್ ಅಬಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.  ಈ ಕಾರ್ಯಾ ಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್, ಪ್ರಿವೆಂಟೀವ್ ಆಫೀಸರ್ (ಗ್ರೇಡ್) ನೌಶಾದ್, ಸಿಇಒಗಳಾದ ಸತೀಶನ್.ಕೆ, ಅತುಲ್ ಟಿ.ವಿ. ಮತ್ತು ಅಶ್ವಿನಿ ವಿ.ವಿ. ಎಂಬವರು ಒಳಗೊಂಡಿದ್ದರು.

You cannot copy contents of this page