ಪ್ರಕೃತಿಯಲ್ಲಿ ಲೀನವಾದ ವಿ.ಎಸ್

ಆಲಪ್ಪುಳ: ನಿಧನಹೊಂದಿದ ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಎಂ ಧುರೀಣರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಯನ್ನು ಜನಸಾಗರದ ಮಧ್ಯೆ ಪುನ್ನಪ್ರ ವಯಲಾರ್ ಹುತಾತ್ಮ ನಗರ ಸ್ಮಶಾನದಲ್ಲಿ ನಿನ್ನೆ ರಾತ್ರಿ 9.15ರ ವೇಳೆ ಸಕಲ ಸರಕಾರಿ ಗೌರವ ಗಳೊಂದಿಗೆ ನೆರವೇರಿಸಲಾಯಿತು.

 ಅಚ್ಯುತಾನಂದನ್‌ರ ಪುತ್ರ ಪಿ.ವಿ. ಅರುಣ್ ಕುಮಾರ್  ಚಿತೆಗೆ ಅಗ್ನಿಸ್ಪರ್ಶ ನಡೆಸಿದರು. ಹಲವು ಗಣ್ಯರು ಸೇರಿದಂತೆ ಭಾರೀ ಜನಸಾಗರವೇ ಅಲ್ಲಿ ನೆರೆದಿತ್ತು. ತಿರುವನಂತಪುರದಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ  ಮೆರವಣಿಗೆ ಮೂಲಕ ವಿ.ಎಸ್.ರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಿಗೆ ತರಲಾಗಿತ್ತು. ಪಾರ್ಥಿವ ಶರೀರದೊಂದಿಗೆ ತಿರುವನಂತಪುರದಿಂದ ಹೊರಟ ಮೆರವಣಿಗೆ ಪುನ್ನಪ್ರಕ್ಕೆ ತಲುಪಲು 31 ತಾಸುಗಳು ಬೇಕಾಗಿಬಂತು.

RELATED NEWS

You cannot copy contents of this page