ಪ್ರತಾಪನಗರ, ಪರಿಸರ ಪ್ರದೇಶಗಳಲ್ಲಿ ವ್ಯಾಪಕಗೊಂಡ ಕಾಡು ಹಂದಿ ಕಾಟ: ಸ್ಥಳೀಯರಲ್ಲಿ ಆತಂಕ
ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪ್ರತಾಪನಗರ, ಸೋಂಕಾಲು, ತಿಂಬರ, ಕುಬಣೂರು ಸಹಿತ ಪರಿಸರ ಪ್ರದೇಶದಲ್ಲಿ ಕಾಡು ಹಂದಿಗಳು ವ್ಯಾಪಕಗೊಂಡಿರುವುದಾಗಿ ಸ್ಥಳೀಯರು ದೂರಿದ್ದಾರೆ. ರಾತ್ರಿ ಹಾಗೂ ಮುಂಜಾನೆ ಹೊತ್ತಲ್ಲಿ ಹಂದಿ ಗಳ ಹಿಂಡು ಸಂಚಾರ ನಡೆಸುತ್ತಿರು ವುದು ಕಂಡುಬರುತ್ತಿದೆ. ಇಂದು ಮುಂಜಾನೆ 5ಗಂಟೆಗೆ ಪ್ರತಾಪನಗರದ ಗಣೇಶ ಮಂದಿರದ ಪರಿಸರದಲ್ಲಿ ಪೊದೆಯೊಳಗಿನಿಂದ ಮೂರು ಹಂದಿಗಳು ರಸ್ತೆ ದಾಟುತ್ತಿರುವ ದೃಶ್ಯ ಬೈಕ್ ಸವಾರರ ಗಮನಕ್ಕೆ ಬಂದಿದೆ. ಕಾಡು ಹಂದಿಗಳ ಕಾಟದಿಂದ ರಾತ್ರಿ ಹಾಗೂ ಮುಂಜಾನೆ ಹೊತ್ತಲ್ಲಿ ಬೈಕ್ ಹಾಗೂ ನಡೆದು ಹೋಗುವ ಸ್ಥಳೀಯರಿಗೆ ಆತಂಕ ಉಂಟಾಗುತ್ತಿದೆ. ಅಲ್ಲದೆ ಕೃಷಿಕರೂ ಸಂಕಷ್ಟಕ್ಕೀಡಾಗುತ್ತಿ ದ್ದಾರೆ. ಹಂದಿಗಳು ಭತ್ತ, ಬಾಳೆ, ಅಡಿಕೆ ಸಹಿತ ತರಕಾರಿ ಗಿಡಗಳನ್ನು ಹಾನಿ ಗೊಳಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್ಗಳ ರಸ್ತೆ ಇಕ್ಕೆಡೆಗಳಲ್ಲಿ ಬೆಳೆದು ನಿಂತ ಕಾಡುಪೊದೆ ಹಂದಿ ಸಹಿತ ವಿಷ ಜಂತುಗಳ ತಾಣವಾಗಿರುವುದಾಗಿ ದೂರಲಾಗಿದೆ. ಸಂಬAಧಪಟ್ಟ ಅಧಿಕಾರಿಗಳು ವ್ಯಾಪಕಗೊಂಡಿರುವ ಹಂದಿಯ ಉಪಟಳ ನಿಯಂತ್ರಿಸಲು ಹಾಗೂ ರಸ್ತೆ ಬದಿಯಲ್ಲಿರುವ ಕಾಡು ಪೊದೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಊರವರು ಆಗ್ರಹಿಸಿದ್ದಾರೆ.