ಪ್ರತಾಪನಗರದಲ್ಲಿ ಉಚಿತ ಆಯುರ್ವೇದ ಶಿಬಿರ

ಉಪ್ಪಳ: ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಪ್ರತಾಪ ನಗರ ಸರಕಾರಿ ಆಯುರ್ವೇದ ಆಸ್ಪತ್ರೆ ಮಂಗಲ್ಪಾಡಿ ಇದರ ಜಂಟಿ ಆಶ್ರಯದಲ್ಲಿ ಉಚಿತ ಆಯುರ್ವೇದ ಶಿಬಿರ ಹಾಗೂ ಔಷಧಿ ವಿತರಣೆ ನಿನ್ನೆ ಶಿವಶಕ್ತಿ ಫ್ರೆಂಡ್ಸ್ ಕ್ಲಬ್‌ನಲ್ಲಿ÷ನಡೆಯಿತು. ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಮೊಕ್ತೇಸರ ಶಿವರಾಮ ಪಕಳ ದೀಪ ಬೆಳಗಿಸಿ ಉದ್ಘಾಟಿಸಿದರು. ಪಂ. ಸದಸ್ಯೆ ಸುಧಾ ಗಣೇಶ್ ಅಧ್ಯಕ್ಷತೆ ವಹಿಸಿದರು.
ಮಂಗಲ್ಪಾಡಿ ಸರಕಾರಿ ಆಯುರ್ವೇದ ವೈದ್ಯ ರಶ್ಮಿ ಮಾಹಿತಿ ನೀಡಿದರು. ಕ್ಲಬ್‌ನ ಅಧ್ಯಕ್ಷ ಗಣೇಶ್, ಆಸ್ಪತ್ರೆ ಸಿಬ್ಬಂದಿಗಳಾದ ಶ್ರುತಿ, ಉಷಾ ಹಾಗೂ ಕ್ಲಬ್‌ನ ಸದಸ್ಯರು, ನಾಗರಿಕರು ಭಾಗವಹಿಸಿದರು. ದಿವಾಕರ ಸ್ವಾಗತಿಸಿ, ಉದಯ ಶಂಕರ ವಂದಿಸಿದರು.

You cannot copy contents of this page