ತಿರುವನಂತಪುರ: ಆದ್ಯತಾ ವಿಭಾಗಕ್ಕೆ ಸೇರಿದ ಹಳದಿ ಮತ್ತು ಪಿಂಕ್ ರೇಶನ್ ಕಾರ್ಡ್‌ನ ಸದಸ್ಯರ ಪೈಕಿ ಸಹಸ್ರಾರು ಮಂದಿಗೆ ಇನ್ನೂ ಮಸ್ಟರಿಂಗ್ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರಕಾರ ಮುಂದಾಗಿದೆ. ಇದಕ್ಕಾಗಿ ರಾಜ್ಯ ಸರಕಾರ ಆಪ್‌ಗೆ ರೂಪು ನೀಡಿದೆ. mera ekyc (ಮೇರಾ ಇಕೆವೈಸಿ) ಎಂಬ ಆಪ್‌ನ್ನು ಇದಕ್ಕಾಗಿ ರೂಪು ನೀಡಲಾಗಿದ್ದು, ಅದನ್ನು ಮೊಬೈಲ್ ಫೋನ್ ಮೂಲಕ ಡೌನ್‌ಲೋಡ್ ಮಾಡಿ ಈ ಆಪ್‌ನಲ್ಲಿ ತಮ್ಮ ಮುಖವನ್ನು ಸ್ಕ್ಯಾನ್ ಮಾಡಬೇಕು. ಹೀಗೆ ಸ್ಕ್ಯಾನ್ ಮಾಡುವವರು ಆಧಾರ್ ಕಾರ್ಡ್ ನಂಬ್ರ ಜೋಡಣೆ ನಡೆಸಿದ ತಮ್ಮ ಫೋನ್‌ನಲ್ಲಿ ಸ್ಕ್ಯಾನ್ ಬಳಿಕ ಬರುವ ಒಟಿಪಿ ನಂಬ್ರವನ್ನು ನೀಡಬೇಕಾಗಿದೆ.
ಆಹಾರ ಮತ್ತು ಸಾರ್ವಜನಿಕ ಇಲಾಖೆಯ ನಿರ್ದೇಶ ಪ್ರಕಾರ ನ್ಯಾ,ನಲ್ ಇನ್‌ಫಾರ್ಮೆಟಿಕ್ಸ್ ಸೆಂಟರ್ (ಎನ್‌ಐಸಿ) ಘಟಕ ಅಭಿವೃದ್ಧಿ ಪಡಿಸಿದ ಆಪ್‌ಗೆ ಇದಕ್ಕಾಗಿ ರೂಪು ನೀಡಲಾಗಿದ್ದು, ಅದು ಈಗ ಪರೀಕ್ಷಣಾ ಹಂತದಲ್ಲಿದ್ದು, ಅದನ್ನು ನವೆಂಬರ್ 11ರಿಂದ ವಿದ್ಯುಕ್ತವಾಗಿ ಜ್ಯಾರಿಗೊಳಿಸಲಾಗುವುದೆಂದು ರಾಜ್ಯ ಆಹಾರ ಮತ್ತು ನಾಗರಿಕಾ ಪೂರೈಕೆ ಇಲಾಖೆ ಸಚಿವ ಜಿ.ಆರ್. ಅನಿಲ್ ತಿಳಿಸಿದ್ದಾರೆ.