ಬದಿಯಡ್ಕ ಮಂಡಲ ಕಾಂಗ್ರೆಸ್‌ನಿಂದ ಇಂದಿರಾಗಾಂಧಿ ಜನ್ಮ ದಿನಾಚರಣೆ

ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ೧೦೯ನೇ ಜನ್ಮದಿನವನ್ನು ಆಚರಿಸಲಾಯಿತು. ಮಂಡಲ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನೇತಾರ ಬಡುವನ್ ಕುಂಞಿ ಗೋಳಿಯಡ್ಕ ಇಂದಿರಾಗಾಂಧಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಮಂಡಲ ಉಪಾಧ್ಯಕ್ಷ ಜಗನ್ನಾಥ ರೈ ಕರ್ಷಕ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಕಡಾರುಬೀಡು, ಕಾರಡ್ಕ ಬ್ಲಾಕ್ ಕಾರ್ಯದರ್ಶಿ ಶಾಫಿ ಗೋಳಿಯಡ್ಕ, ಮಂಡಲ ಕಾರ್ಯದರ್ಶಿ ಶಾಹುಲ್ ಹಮೀದ್, ಕೇಶವ ಪಾಟಾಳಿ, ಐತ್ತಪ್ಪ ಪಟ್ಟಾಜೆ, ರವೀಂದ್ರ ಕುಂಟಾಲುಮೂಲೆ, ಶೆರೀಫ್ ಬಿರ್ಮಿನಡ್ಕ, ಸತೀಶ್ ಮಾನ್ಯ, ನವೀನ್ ರೈ ಪೆರಡಾಲ ಗುತ್ತು ಮಾತನಾಡಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ವಿಜೇತರಾದ ಬದಿಯಡ್ಕ ಮಂಡಲ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣ ಕುಮಾರ್ ಭಟ್, ಬ್ಲಾಕ್ ಕಾರ್ಯದರ್ಶಿ ಆಗಿ ಆಯ್ಕೆಯಾದ ಶಾಫಿ ಪಯ್ಯಾಲಡ್ಕ ಅವರನ್ನು ಮಂಡಲ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಅಭಿನಂದಿಸಲಾಯಿತು. ಮಂಡಲ ಕಾರ್ಯದರ್ಶಿ  ಲೋಹಿತಾಕ್ಷ ಕುಟ್ಟಿಮೂಲೆ ಸ್ವಾಗತಿಸಿ, ಜಗದೀಶ್  ಕಿಳಿಂಗಾರು ವಂದಿಸಿದರು.

You cannot copy contents of this page