ಬದಿಯಡ್ಕದಲ್ಲಿ ಆರೋಗ್ಯ ಅಧಿಕಾರಿಗಳಿಂದ ತಪಾಸಣೆ

ಬದಿಯಡ್ಕ: ಬದಿಯಡ್ಕ ಪೇಟೆಯ ಹೋಟೆಲ್, ಕೂಲ್‌ಬಾರ್‌ಗಳು ಹಾಗೂ ಕೋಳಿ ಅಂಗಡಿಗಳಿಗೆ  ಆರೋಗ್ಯ ಇಲಾಖೆ  ಅಧಿಕಾರಿಗಳು ದಾಳಿ ನಡೆಸಿ ತಪಾಸಣೆಗೈದರು. 14 ಹೋಟೆಲ್ ಗಳು, 6 ಕೂಲ್‌ಬಾರ್‌ಗಳು, 1 ಬೇಕರಿ ಹಾಗೂ 2 ಕೋಳಿ ಅಂಗಡಿಗಳಲ್ಲಿ ತಪಾಸಣೆ ನಡೆಸಲಾಯಿತು. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಬದಿಯಡ್ಕ ಆರೋಗ್ಯ ಕೇಂದ್ರದ ಮೆಡಿಕಲ್ ಆಫೀಸರ್ ಡಾ| ಹರಿಚಂದ್ರನ್, ಹೆಲ್ತ್ ಇನ್ಸ್‌ಪೆಕ್ಟರ್ ಅಜಿತ್ ರಾಜ್, ಜ್ಯೂನಿಯರ್ ಇನ್ಸ್‌ಪೆಕ್ಟರ್ ಕೆ.ಎಸ್. ರಾಜೇಶ್ ಎಂಬಿವರು ಭಾಗವಹಿಸಿದ್ದರು.

ಮಳೆಗಾಲದಂಗವಾಗಿ ಮುಂಜಾಗ್ರತೆ ಹಾಗೂ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವುದರ ಅಂಗವಾಗಿ ವಿವಿಧೆಡೆ ದಾಳಿ ನಡೆಸಿ ತಪಾಸಣೆ ನಡೆಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

You cannot copy contents of this page