ಮಂಜೇಶ್ವರ ಎಡರಂಗದ ಅಭ್ಯರ್ಥಿ ಕೆ.ಆರ್. ಜಯಾನಂದರಿಂದ ಪರ್ಯಟನೆಗೆ ಚಾಲನೆ

ಮಂಜೇಶ್ವರ: ವಿಧಾನಸಭಾ ಕ್ಷೇತ್ರದ ಎಡರಂಗದ ಅಭ್ಯರ್ಥಿ ಕೆ.ಆರ್. ಜಯಾನಂದ ಚುನಾವಣಾ ಪ್ರಚಾರ ಆರಂಭಿಸಿದರು. ಪೈವಳಿಕೆ ಬೋಳಂಗಳದ ಹುತಾತ್ಮ ಮಂಟಪದಿಂದ ನಿನ್ನೆ ಸಂಜೆ ಇವರು ಪರ್ಯಟನೆಗೆ ಚಾಲನೆ ನೀಡಿ ದರು. ಸಿಪಿಎಂ ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, ವಿನಯ ಕುಮಾರ್, ಹಾರೀಸ್ ಪೈವಳಿಕೆ, ಪುರುಷೋತ್ತಮ ಬಳ್ಳೂರು, ಚಂದ್ರ ನಾಯ್ಕ್, ಸಿಪಿಐ ಮುಖಂಡ ಅಜಿತ್ ಎಂ.ಸಿ. ಲಾಲ್ಭಾಗ್ ಭಾಗವಹಿಸಿದರು.

ಹಿರಿಯ ನೇತಾರ ನಾರಾಯಣ ಶೆಟ್ಟಿ ಕೆ.ಆರ್. ಜಯಾನಂದರನ್ನು ಸ್ವಾಗತಿಸಿದರು. ಸಿಪಿಐ ಮುಖಂಡನಾಗಿದ್ದ ಸಿ.ಕೆ. ಚಿಪ್ಪಾರ್‌ರ ಸ್ಮಾರಕ, ಭಾಸ್ಕರ ಕುಂಬಳೆ ಹುತಾತ್ಮ ಮಂಟಪ, ಮುರಳಿ ಹುತಾತ್ಮ ಮಂಟಪ, ಮಂಜೇಶ್ವರ ರಾಮಯ್ಯ ಶೆಟ್ಟಿ ಸ್ಮಾರಕದಲ್ಲಿ ಪುಷ್ಪಾರ್ಚನೆ ನಡೆಸಿದರು. ಸುಬ್ಬಯ್ಯಕಟ್ಟೆ ಯಲ್ಲಿ ನಡೆದ ಇಫ್ತಾರ್ ಕೂಟದಲ್ಲೂ ಜಯಾನಂದ ಭಾಗವಹಿಸಿದರು.

RELATED NEWS

You cannot copy contents of this page