ಬದಿಯಡ್ಕದಲ್ಲಿ ಬಿಜೆಪಿ ಕಾರ್ಯಕರ್ತನಿಗೆ ಇರಿತ
ಬದಿಯಡ್ಕ: ಬದಿಯಡ್ಕದಲ್ಲಿ ಬಿಜೆಪಿ ಕಾರ್ಯಕರ್ತನಿಗೆ ತಂಡವೊಂದು ತಡೆದು ನಿಲ್ಲಿಸಿ ಇರಿದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ಬದಿಯಡ್ಕ ನಿವಾಸಿ ರಂಜಿತ್ (30) ಎಂಬವರು ಇರಿತದಿಂದ ಗಾಯಗೊಂಡಿದ್ದಾರೆ. ಕೈಗೆ ಗಾಯಗೊಂಡ ಇವರು ಆಸ್ಪ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ನಿನ್ನೆ ಮಧ್ಯಾಹ್ನ 2.30ರ ವೇಳೆ ರಂಜಿತ್ ಬೈಕ್ನಲ್ಲಿ ತೆರಳುತ್ತಿದ್ದಾಗ ಬದಿಯಡ್ಕ ಹಳೆ ಪೊಲೀಸ್ ಕ್ವಾರ್ಟರ್ಸ್ ಸಮೀಪ ಇಬ್ಬರು ವ್ಯಕ್ತಿಗಳು ತಡೆದು ನಿಲ್ಲಿಸಿ ಚಾಕುನಿಂದ ಇರಿದಿದ್ದಾರೆ. ತಡೆಯಲು ಯತ್ನಿಸಿದಾಗ ರಂಜಿತ್ರ ಕೈಗೆ ಗಾಯ ಗೊಂಡಿರುವುದಾಗಿ ದೂರಲಾಗಿದೆ. ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿ ದ್ದಾರೆ. ಈ ಬಗ್ಗೆ ಲಭಿಸಿದ ದೂರಿನಂತೆ ಗಾಯಗೊಂಡ ರಂಜಿತ್ರ ಹೇಳಿಕೆ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.