ಬಾಂಬ್ ತಯಾರಿ ವೇಳೆ ಸ್ಫೋಟ: ಸಿಪಿಎಂ ನೇತಾರನ ಪುತ್ರ ಸಹಿತ ಇಬ್ಬರಿಗೆ ಗಂಭೀರ

ಕಣ್ಣೂರು: ನಾಡು, ನಗರದಲ್ಲಿ ಚುನಾವಣಾ ಪ್ರಚಾರ ಕಾವೇರತೊಡಗಿರು ವಾಗಲೇ ಕಣ್ಣೂರು ಸಮೀಪ ಬಾಂಬ್ ತಯಾರಿ ಕೇಂದ್ರದಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಸಿಪಿಎಂ ಸ್ಥಳೀಯ ನೇತಾರನ ಪುತ್ರ ಸಹಿತ ನಾಲ್ವರು ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವೆಂದು ಹೇಳಲಾಗುತ್ತಿದೆ.

ಪಾನೂರು ಪೊಲೀಸ್ ಠಾಣೆ ವ್ಯಾಪ್ತಿಯ ಮುಳಿಯಾತ್ತೋಡ್ ಎಂಬಲ್ಲಿ ಇಂದು ಮುಂಜಾನೆ ಒಂದು ಗಂಟೆ ವೇಳೆ ಸ್ಫೋಟವುಂಟಾಗಿದೆ. ಜನವಾಸವಿಲ್ಲದ ಕಟ್ಟಡದ ಮೇಲಂತ ಸ್ತಿನಲ್ಲಿ ಸ್ಫೋಟ ಸಂಭವಿಸಿದೆ.  ಸ್ಫೋಟದ ಸದ್ದು ಕೇಳಿ ನಾಗರಿಕರು ಅಲ್ಲಿಗೆ ತಲುಪಿದ್ದು, ಈ ವೇಳೆ ವಿನೀಶ್ (೨೪), ಶೆರಿನ್ (೨೨), ವಿನೋದ್, ಅಶ್ವಂತ್ ಎಂಬಿವರು ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ  ಗಾಯಾಳುಗಳನ್ನು ಕಣ್ಣೂರಿ ನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿದೆ. ಇಬ್ಬರನ್ನು ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದು ಪಾನೂರು ಠಾಣೆ ಇನ್‌ಸ್ಪೆಕ್ಟರ್ ಕೆ. ಪ್ರೇಂ ಸದನ್ ನೇತೃತ್ವದ ಪೊಲೀಸರು  ತಲುಪಿ ತನಿಖೆ ಆರಂಭಿಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಕಾವಲು ಏರ್ಪಡಿಸಲಾಗಿದೆ.

RELATED NEWS

You cannot copy contents of this page