ಬಾಯಾರು ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಗೆ ಸಹಕಾರ ಭಾರತಿ ಅಭ್ಯರ್ಥಿಗಳ ಅವಿರೋಧ ಆಯ್ಕೆ

ಪೈವಳಿಕೆ: ಬಾಯಾರು ಸೇವಾ ಸಹಕಾರಿ ಬ್ಯಾಂಕ್ ನ ಆಡಳಿತ ಸಮಿತಿಯ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾದರು. ಸುಬ್ರಹ್ಮಣ್ಯ ಭಟ್ ಅಧ್ಯಕ್ಷರಾಗಿರುವ ನಿರ್ದೇಶಕ ಮಂಡಳಿಗೆ ಪ್ರಮೋದ್ ಕುಮಾರ್, ಸಂದೀಪ್ ಬಿ.ಸಿ, ಮಿತೇಷ್ ಕುಮಾರ್, ಶ್ರೀಕಾಂತ್ ಭಟ್, ಪ್ರವೀಣ್ ಕುಮಾರ್, ಗೀತಾ ಲತಾ, ಜಲಜಾಕ್ಷಿ ಹಾಗೂ ಪರಮೇಶ್ವರಿ ಉಳುವಾನ ಆಯ್ಕೆ ಯಾದರು. ನಿಕಟಪೂರ್ವ ಅಧ್ಯಕ್ಷ ಸುಬ್ಬಣ್ಣ ಭಟ್, ನಿರ್ದೇಶಕ ಧರ್ಮ ಪಾಲ್, ಬ್ಯಾಂಕ್‌ನ ಪ್ರಭಾರಿಗಳಾದ ಬಾನೋಟ್ಟು ಬಾಲಕೃಷ್ಣ ಶೆಟ್ಟಿ, ಪ್ರೇಂ ಕುಮಾರ್ ಐಲ, ಸಹಕಾರ ಭಾರತಿ ನೇತಾರರಾದ ಶಂಕರನಾರಾ ಯಣ ಕಿದೂರು, ಗಣೇಶ ಪಾರೆಕಟ್ಟ, ವಿಘ್ನೇಶ್ವರ ಕೆದುಕೋಡಿ, ಅಶೋಕ್ ಬಾಡೂರು, ಸಂಘ ಪರಿವಾರದ ಹಿರಿಯರಾದ ಶಂಕರ ಭಟ್ ಉಳು ವಾನ, ಕುಂಞಣ್ಣ ರೈ ಕಯ್ಯಾರು ಹಾಗೂ ಬಿಜೆಪಿ ಪ್ರತಿನಿಧಿಗಳಾದ ಮಣಿಕಂಠ ರೈ, ಸುಬ್ರಹ್ಮಣ್ಯ ಭಟ್ ಅಭಿನಂದನೆ ಸಲ್ಲಿಸಿದರು.

You cannot copy contents of this page