ಕೊಚ್ಚಿ:ಆಲುವಾದಲ್ಲಿ ಬಾರ್ ನೌಕರನನ್ನು ತಡೆದು ನಿಲ್ಲಿಸಿ ಮೊಬೈಲ್ ಫೋನ್, ಹಣ ಅಪಹರಿಸಲಾಗಿದೆ. ಕಣ್ಣೂರು ನಿವಾಸಿ ಶ್ರೀಜೇಶ್ನ ಮೊಬೈಲ್ ಹಾಗೂ 4000 ರೂ.ವನ್ನು ನಾಲ್ಕು ಮಂದಿಯ ತಂಡ ಅಪಹರಿಸಿದೆ. ಆಲುವಾದಲ್ಲಿರುವ ಅಲಂಕಾರ್ ಬಾರ್ನ ನೌಕರ ಶ್ರೀಜೇಶ್ ನಿನ್ನೆ ಮುಂಜಾನೆ ರೈಲಿನಿಂದ ಇಳಿದು ಹಳಿ ಮೂಲಕ ವಾಸ ಸ್ಥಳಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ದರೋಡೆ ತಂಡ ಇವರನ್ನು ತಡೆದು ನಿಲ್ಲಿಸಿದೆ.
ಬಳಿಕ ಮೊಬೈಲ್ ಫೋನ್ ಹಾಗೂ ಕೈಯಲ್ಲಿದ್ದ ನಗದನ್ನು ಅಪಹರಿಸಿದೆ. ಪ್ರಕರಣದಲ್ಲಿ ಆಲುವಾ ಪೊಲೀಸರು ಕೇಸು ದಾಖಲಿಸಿದ್ದಾರೆ.