ಬಾವಿಶುಚೀಕರಿಸಲು ಇಳಿದ ಇಬ್ಬರು ಉಸಿರುಗಟ್ಟಿ ಸಾವು
ಪೆರ್ಲ: ಬಾವಿ ಶುಚೀಕರಿಸಲೆಂದು ಇಳಿದ ಇಬ್ಬರು ಯುವಕರು ಉಸಿರುಗಟ್ಟಿ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.
ವಿಟ್ಲ ಬಳಿಯ ಕೇಪು ಎಂಬಲ್ಲಿ ನಿನ್ನೆ ಅಪರಾಹ್ನ ಈ ದಾರುಣ ಘಟನೆ ನಡೆದಿದೆ. ಆನೆಕಲ್ಲು ಬಳಿಯ ಸೊಡಂಕೂರು ಎಂಬಲ್ಲಿನ ಇಬ್ರಾಹಿಂ ಎಂಬವರ ಪುತ್ರ ಮುಹಮ್ಮದಲಿ (೨೩), ವಿಟ್ಲ ಬಳಿಯ ಪರ್ತಿಪ್ಪಾಡಿ ನಿವಾಸಿ ಇಬ್ರಾಹಿಂ (೩೮) ಎಂಬಿ ವರು ಮೃತಪಟ್ಟ ದುರ್ದೈವಿಗಳಾ ಗಿದ್ದಾರೆ. ಈ ಇಬ್ಬರು ಬಾವಿ ಶುಚೀಕರಿಸಲೆಂದು ಇಳಿದು ಮಧ್ಯಾಹ್ನ ವೇಳೆ ಮೇಲಕ್ಕೆ ಹತ್ತಿದ್ದರು. ಅನಂತರ ಬಾವಿಯಲ್ಲಿ ರಿಂಗ್ ಅಳವಡಿಸಲು ಮುಹಮ್ಮದಲಿ ಬಾವಿಗೆ ಇಳಿದಿದ್ದರು. ಆದರೆ ಅವರು ಮೇಲೆ ಹತ್ತದ ಹಿನ್ನೆಲೆಯಲ್ಲಿ ಇಬ್ರಾಹಿಂ ಬಾವಿಯೊಳಗೆ ಇಳಿದಿದ್ದ ರು. ಆದರೆ ಬಾವಿಯೊಳಗಿದ್ದವರು ಮೇಲೆ ಹತ್ತದ ಹಿನ್ನೆಲೆಯಲ್ಲಿ ಸ್ಥಳೀಯರು ನೋಡಿದಾಗ ಅವರು ಬಾವಿಯೊಳಗೆ ಬಿದ್ದುಕೊಂಡಿ ರುವುದು ಕಂಡುಬಂದಿದೆ. ಕೂಡಲೇ ಅಗ್ನಿಶಾಮಕದಳ ತಲುಪಿ ಅವರನ್ನು ಬಾವಿಯಿಂದ ಮೇಲೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ವಿಟ್ಲ ಠಾಣೆ ಪೊಲೀಸರು ಪಂಚನಾಮೆ ನಡೆಸಿದ ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.
ಮುಹಮ್ಮದಲಿಯ ಮೃತದೇಹ ವನ್ನು ಆನೆಕಲ್ಲಿಗೆ ತಲುಪಿಸಿ ಅಲ್ಲಿನ ಮೈಮೂನ್ ಜುಮಾ ಮಸೀದಿ ಪರಿಸರದಲ್ಲಿ ಅಂತ್ಯಸಂಸ್ಕಾರ ನಡೆಸ ಲಾಯಿತು. ಇಬ್ರಾಹಿಂರ ಮೃತದೇಹ ವನ್ನು ಪರ್ತಿಪಾಡಿ ಬಳಿಯ ಮಸೀದಿ ಪರಿಸರದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಮೃತ ಮುಹಮ್ಮದಲಿ ತಂದೆ, ತಾಯಿ ಮೈಮೂನ, ಇಬ್ಬರು ಸಹೋ ದರರು, ಓರ್ವೆ ಸಹೋದರಿ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.