ಬಿಎಂಎಸ್ ಬಾಯಾರು, ಹೇರೂರು ಯೂನಿಟ್ ಸಭೆ

ಉಪ್ಪಳ: ಬಿಎಂಎಸ್ ಜಿಲ್ಲಾ ಪದಾಧಿಕಾರಿಗಳು ಘಟಕಗಳಿಗೆ ಭೇಟಿ ನೀಡುವ ಯೂನಿಟ್ ಪ್ರವಾಸ ಯೋಜನೆ ಅಂಗವಾಗಿ ಬಾಯಾರು ಯೂನಿಟ್, ಹೇರೂರು ಯೂನಿಟ್ ಗಳಲ್ಲಿ ಸಭೆ ಜರಗಿತು. ಬಾಯಾರು ಕ್ಯಾಂಪ್ಕೋ ಪರಿಸರದಲ್ಲಿ ನಡೆದ ಸಭೆಯಲ್ಲಿ ಯೂನಿಟ್ ಅಧ್ಯಕ್ಷ ಕೆ. ಕೃಷ್ಣ ನಾಯ್ಕ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಅಧ್ಯಕ್ಷ ಉಪೇಂದ್ರ ಕೋಟೆಕಣಿ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ. ನಾಯರ್, ಜೊತೆ ಕಾರ್ಯದರ್ಶಿಗಳಾದ ದಿನೇಶ್ ಪಿ, ಹರೀಶ್ ಕುದ್ರೆಪ್ಪಾಡಿ, ಪ್ರದೀಪ್ ಕಾಞಂಗಾಡ್ ಉಪಸ್ಥಿತರಿದ್ದರು. ಸುಬ್ಬಣ್ಣ ಸ್ವಾಗತಿಸಿ, ಲೋಕೇಶ್ ವಂದಿಸಿದರು.

ಹೇರೂರು ಯೂನಿಟ್ ಸಭೆ ಹೇರೂರು ಮಂದಿರದಲ್ಲಿ ಜರಗಿದ್ದು, ಘಟಕಾಧ್ಯಕ್ಷ ಸದಾಶಿವ ಚಾರಂಮುಗೆರು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಉದ್ಘಾಟಿಸಿದರು. ವಲಯ ಕಾರ್ಯದರ್ಶಿ ಸಂಜೀವ, ಕೋಶಾಧಿಕಾರಿ ಐತ್ತಪ್ಪ ನಾರಾಯಣಮಂಗಲ, ಯೂನಿಟ್ ಕಾರ್ಯದರ್ಶಿ ರಂಜಿತ್ ಹೇರೂರು, ಪ್ರಮೋದ್ ಹೇರೂರು ಮಾತನಾಡಿದರು.

You cannot copy contents of this page