ಬಿಜೆಪಿ ಸದಸ್ಯತ್ವ ಅಭಿಯಾನ : ಕೆ. ಸುರೇಂದ್ರನ್ ನಾಳೆ ಮಂಜೇಶ್ವರಕ್ಕೆ

ಮಂಜೇಶ್ವರ: ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಿದ್ದು, ಮಂಜೇಶ್ವರ ಮಂಡಲದಲ್ಲಿ ನಾಳೆ ನಡೆಯುವ  ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಲು ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ ಕೆ. ಸುರೇಂದ್ರನ್  ಮಂಜೇಶ್ವರಕ್ಕೆ ತಲುಪುವರು. ಸದಸ್ಯತ್ವ ಅಭಿಯಾನ ಹಾಗೂ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನದಂಗವಾಗಿ ನಡೆಯುವ  ಪುಷ್ಪಾರ್ಚನೆಯಲ್ಲಿ ಅವರು ಭಾಗವಹಿಸುವರು. ವರ್ಕಾಡಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ಹಾಗೂ ಸಂಜೆ  ಕೆದುಂಬಾಡಿಯಲ್ಲಿ ಸಮಾರೋಪ ಕಾರ್ಯಕ್ರಮವನ್ನು ಪಕ್ಷ ಹಮ್ಮಿಕೊಂಡಿದೆ.

You cannot copy contents of this page