ಕಾಸರಗೋಡು: ಬೇಕರಿಗೆ ನುಗ್ಗಿ ತಂಡವೊಂದು ಅದರ ಪಾಲುದಾರನ ಮೇಲೆ ಹಲ್ಲೆ ನಡೆಸಿ, ಬೇಕರಿ ಸಾಮಗ್ರಿಗಳನ್ನು ಹೊಡೆದು ನಾಶಗೊಳಿಸಿ ಅದರಿಂದ ೫೦,೦೦೦ ರೂ.ಗಳ ನಷ್ಟ ಉಂಟಾಗಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ನಾಲ್ವರ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೇಕರಿಯ ಪಾಲುದಾರ ಚೆಂಗಳ ಬೇರ್ಕದ ಅಬ್ದುಲ್ ಹ್ಯಾರಿಸ್ ಬಿ (೪೮) ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಚಾಲದ ತನ್‌ಶೀರ್, ಟಿಪ್ಪುನಗರದ ಸಿನಾನ್, ಚಾಲದ ಶಾಹೀದ್ ಮತ್ತು ಕಂಡಲ್ಲಿ ಗುರುತು ಹಚ್ಚಲು ಸಾಧ್ಯವಾಗುವ ಇನ್ನೋರ್ವ ಸೇರಿದಂತೆ ಒಟ್ಟು ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನ. ೧೧ರಂದು ಸಂಜೆ ಈ ಘಟನೆ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.