ಬೇಕಲ ಕೋಟೆಯ ಒಂದು ಭಾಗ ಕುಸಿತ

ಕಾಸರಗೋಡು: ಅಂತಾ ರಾಷ್ಟ್ರೀಯ ಪ್ರವಾಸೋದ್ಯಮ ಭೂಪಟದಲ್ಲಿ ಸ್ಥಾನ ಪಡೆದಿರುವ ಬೇಕಲಕೋಟೆಯ ಒಂದು ಭಾಗ ಧಾರಾಕಾರ ಮಳೆಗೆ ಕುಸಿದುಬಿದ್ದಿದೆ.

ಈ ಕೋಟೆಯ ಐದನೇ ನಂಬ್ರದ ಪ್ರವೇಶದ್ವಾರದ ಸಮುದ್ರ ದಡದ ಸಮೀಪದಲ್ಲೇ ಇರುವ ಈ ಕೋಟೆಯ ಒಂದು ಭಾಗ ರಾತ್ರಿ ವೇಳೆ ಕುಸಿದುಬಿದ್ದಿದೆ. ಕಳೆದ ವರ್ಷ ಈ ಜಾಗದಲ್ಲಿ ಕೆಂಪುಕಲ್ಲಿನ ನಡೆಹಾದಿ ನಿರ್ಮಿಸಲಾಗಿದ್ದು, ಅದಕ್ಕೂ ಈಗ ಕುಸಿತದ ಬೆದರಿಕೆ ಉಂಟಾಗಿದೆ. ಕೋಟೆ  ಕುಸಿದುಬಿದ್ದ ಈ ಭಾಗಕ್ಕೆ ಪ್ರವಾಸಿಗರ ಸಂದರ್ಶನಕ್ಕೆ ಈಗ ತಡೆ ಹೇರಲಾಗಿದೆ. ಈ ಭಾಗ ಇನ್ನಷ್ಟು ಕುಸಿದು ಬೀಳದಿರಲು ಅದರ ಮೇಲೆ ಸದ್ಯ ಪ್ಲಾಸ್ಟಿಕ್ ಶೀಟ್ ಅಳವಡಿಸಲಾಗಿದೆ. ಆ ಮೂಲಕ ಆ ಭಾಗದಲ್ಲಿ ಮಳೆ ನೀರು ಬೀಳದೇ ಇರುವ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ.

ಬೇಕಲ ಕೋಟೆ  ಕೇಂದ್ರ ಸರಕಾರದ ಪ್ರಾಚ್ಯ ಇಲಾಖೆಗೆ ಸೇರಿದ್ದಾಗಿದೆ.

2019ರಲ್ಲೂ ಕೋಟೆಯ ಒಂದು ಭಾಗ ಕುಸಿದಿತ್ತು. ಅದರಿಂದಾಗಿ ಕೋಟೆಯ ಪ್ರಾಚೀನ ತೆಯ ಸೊಬಗು ನಷ್ಟ ಹೊಂದದೇ ಇರಲು ತಮಿಳುನಾಡಿನ ತಜ್ಞರ ತಂಡ 2024ರಲ್ಲಿ ಆಗಮಿಸಿ ಈ ಭಾಗವನ್ನು ಪುನರ್ ನಿರ್ಮಿಸಿತ್ತು. ಈಗ ಕುಸಿದ ಭಾಗವನ್ನು ಮಳೆಗಾಲದ ಬಳಿಕ ಪುನರ್ ನಿರ್ಮಿಸಲಾಗುವು ದೆಂದು ಆರ್ಕಿಯೋಜಿಕಲ್ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳು ತಿಳಿಸಿದ್ದಾರೆ.

RELATED NEWS

You cannot copy contents of this page