ಬೈಕ್ನಲ್ಲಿ ಬಂದು ಮಹಿಳೆಯ ಚಿನ್ನದ ಸರ ಎಗರಿಸಿದ ಪ್ರಕರಣ: ಆರೋಪಿ ಸೆರೆ
ಕಾಸರಗೋಡು: ಬೈಕ್ನಲ್ಲಿ ಬಂದು ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಪ್ರಕರಣದ ಆರೋಪಿಯನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.
ಕಳನಾಡು ನಿವಾಸಿ ಹಾಗೂ ಈಗ ಮೇಲ್ಪರಂಬ ಕೂವತ್ತೊಟ್ಟಿಯಲ್ಲಿ ವಾಸಿಸುತ್ತಿರುವ ಶಮ್ನಾಸ್ ಅಲಿ ಯಾಸ್ ಮೊಹಮ್ಮದ್ ಶಮ್ನಾಸ್ (೩೨) ಬಂಧಿತ ಆರೋಪಿ. ಈತ ಕಳೆದ ಜುಲೈ ೨೬ರಂದು ಪರಿಯಾರಂ ಪಿಲಾತ್ತರದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗಣೇಶ ಎಂಬವರ ಪತ್ನಿ ಶ್ರೀಜಾ (೩೯) ಎಂಬವರ ಕುತ್ತಿಗೆಯಿಂದ ಚಿನ್ನದ ಸರವನ್ನು ಬೈಕ್ನಲ್ಲಿ ಬಂದು ಎಗರಿಸಿದ ಪ್ರಕರಣದ ಆರೋಪಿಯಾಗಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ಬೇಕಲ ಪೊಲೀಸರು ಈತನನ್ನು ವಶಕ್ಕೆ ತೆಗೆದುಕೊಂಡಿದ್ದರು. ಈತನನ್ನು ತೀವ್ರ ವಿಚಾರಣೆಗೊಳ ಪಡಿಸಿದಾಗ ಪಿಲಾತ್ತರದಲ್ಲಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿರುವ ಪ್ರಕರಣದಲ್ಲಿ ಈತ ಆರೋಪಿಯಾಗಿರುವುದಾಗಿ ಸ್ಪಷ್ಟ ಗೊಂಡಿತ್ತು. ಅದರಂತೆ ಆತನನ್ನು ಬೇಕಲ ಪೊಲೀಸರು ನಂತರ ಪರಿಯಾರಂ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.