ಭರದಿಂದ ಸಾಗುತ್ತಿರುವ ಬೇಕೂರು ಕುಟುಂಬ ಕ್ಷೇಮ ಕೇಂದ್ರದ ನೂತನ ಕಟ್ಟಡ ಕಾಮಗಾರಿ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಬೇಕೂರು ಕುಟುಂಬ ಕ್ಷೇಮ ಕೇಂದ್ರದ ನೂತನ ಕಟ್ಟಡ ಕಾಮಗಾರಿ ಭರದಿಂದ ಸಾಗುತ್ತಿದ್ದು, ಊರವರ ಹಲವು ವರ್ಷಗಳ ಬೇಡಿಕೆ ಈಡೇರುತ್ತಿದೆ. ಸುಮಾರು 60 ವರ್ಷಗಳ ಹಿಂದಿನ ಈ ಕಟ್ಟಡ ಶೋಚನೀಯವಸ್ಥೆಗೆ ತಲುಪಿ ಆತಂಕದಲ್ಲೇ ಕಟ್ಟಡದಲ್ಲಿ ಹಲವು ವರ್ಷಗಳ ಕಾಲ ಕುಟುಂಬ ಕ್ಷೇಮ ಕೇಂದ್ರ ಕಾರ್ಯವೆಸಗುತ್ತಿತ್ತು. ಊರವರ ಹಾಗೂ ವಾರ್ಡ್ ಪ್ರತಿನಿದಿsಗಳ ನಿರಂತರ ಒತ್ತಾಯದ ಫಲವಾಗಿ ನೂತನ ಕಟ್ಟಡಕ್ಕೆ ಶಾಸಕರ ನಿಧಿಯಿಂದ ಸುಮಾರು 20ಲಕ್ಷ ರೂ ಮಂಜೂರುಗೊAಡು ಕಾಮಗಾರಿ ಆರಂಭಿಸಲಾಗಿದ್ದು, ಈಗ ಮುಕ್ತಾಯದ ಹಂತಕ್ಕೆ ತಲುಪಿದೆ.
ಒಂದು ತಿಂಗಳಲ್ಲಿ ಕಾಮಗಾರಿ ಪೂರ್ತಿಗೊಳಿಸಲಾಗುವುದೆಂದು ಗುತ್ತಿಗೆದಾರ ತಿಳಿಸಿದ್ದಾರೆ. ಈಗ ಕುಟುಂಬ ಕ್ಷೇಮ ಕೇಂದ್ರ ಪರಿಸರದ ಶಾಲೆಯ ಕೊಠಡಿಯಲ್ಲಿ ಕಾರ್ಯನಿರ್ವಹಿಸÀÄತ್ತಿದೆ.

You cannot copy contents of this page