ಭೂಕುಸಿತ: ಮೃತದೇಹದ ಅವಶಿಷ್ಟ ಪತ್ತೆ

 ಕಲ್ಪೆಟ್ಟ: ಭಾರೀ ಭೂಕುಸಿತ ಸಂಭವಿಸಿದ ವಯನಾಡ್ ಚೂರಲ್ ಮಲೆ, ಮುಂಡಕೈಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ನಿನ್ನೆ ಪತ್ತೆಯಾಗಿದೆ. ಮೃತದೇಹದ ಅವಶಿಷ್ಟಗಳು ಮರದಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿತ್ತು. ಜೇನು ಸಂಗ್ರಹಿಸುವ ಅರಣ್ಯಕ್ಕೆ ಹೋದವರಿಗೆ ಮೃತದೇಹ ಪತ್ತೆಯಾಗಿದೆ.  ಜುಲೈ ೨೯ರಂದು ಭೂಕುಸಿತ ಸಂಭವಿಸಿತ್ತು. ಹಲವರು ಈ ದುರಂತದಲ್ಲಿ ಮೃತಪ ಟ್ಟಿದ್ದಾರೆ. ಇನ್ನಷ್ಟು ಮಂದಿ ನಾಪತ್ತೆ ಯಾಗಿರುವುದಾಗಿ ಹೇಳಲಾಗುತ್ತಿದೆ. ಅತೀ ತೀವ್ರ ಮಳೆಗೆ ಏಳು ಕಿಲೋ ಮೀಟರ್ ದೂರದಿಂದ ಬಂಡೆಕಲ್ಲು ಗಳು, ಮಣ್ಣು ಸಹಿತ ಕೊಚ್ಚಿ ಹೋಗಿ ಅಲ್ಲಿ ಭಾರೀ ದುರಂತವೇ ಸಂಭವಿಸಿತ್ತು.

RELATED NEWS

You cannot copy contents of this page