ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೃಹತ್ ಚಿನ್ನ ಬೇಟೆ: ಜಿಲ್ಲೆಯ ಇಬ್ಬರು ಸೆರೆ

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೃಹತ್ ಚಿನ್ನ ಸಾಗಾಟ ಪತ್ತೆಹಚ್ಚಲಾಗಿದೆ. ಆರೋಪಿಗಳಾದ ಇಬ್ಬರು ಜಿಲ್ಲೆಯ ನಿವಾಸಿಗಳನ್ನು ಸೆರೆ ಹಿಡಿಯಲಾಗಿದೆ. ನಿನ್ನೆ ಬೆಳಿಗ್ಗೆ ಬಹರೈನ್‌ನಿಂದ ಬಂದ ವಿಮಾನದಲ್ಲಿನ ಪ್ರಯಾಣಿಕರಾದ ಉಪ್ಪಳ ನಿವಾಸಿ ಅಬ್ದುಲ್ ಜಲೀಲ್ ಎಂಬಾತನಿಂದ ೬೯೮ ಗ್ರಾಂ ಚಿನ್ನ ಮಿಶ್ರಿತವನ್ನು ವಶಪಡಿಸಲಾಗಿದೆ. ಕ್ಯಾಪ್ಸೂಲ್ ರೂಪದಲ್ಲಿ ಗುದದ್ವಾರದಲ್ಲಿ ಬಚ್ಚಿಟ್ಟು ಚಿನ್ನವನ್ನು ಸಾಗಿಸಲಾಗಿದೆ. ವಶಪಡಿಸಿದ ಚಿನ್ನಕ್ಕೆ ೪೧,೯೪,೯೮೦ ರೂ. ಮೌಲ್ಯ ಅಂದಾಜಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ದುಬಾಯಿಯಿಂದ ಮಂU ಳೂರಿಗಿರುವ ವಿಮಾನದಲ್ಲಿ ಸಂಚರಿಸಿದ ಕಾಸರಗೋಡು ನಿವಾಸಿ ಅಸರುದ್ದೀನ್ ನಿಂದ ೨೩೦ ಗ್ರಾಂ ತೂಕದ ೨೪ ಕ್ಯಾರೆಟ್ ಚಿನ್ನವನ್ನು ವಶಪಡಿಸಲಾಗಿದೆ. ೧೩,೮೨,೩೦೦ ರೂ. ಮೌಲ್ಯ ಇದಕ್ಕೆ ಅಂದಾಜಿಸಲಾಗಿದೆ. ಟ್ಯಾಲಿ ಬ್ಯಾಗ್‌ನಲ್ಲಿಟ್ಟ ಬಾಬಾ ಸ್ಯೂಟ್‌ಗಳ ಪ್ರೆಸ್ ಬಟನ್‌ಗಳ ಒಳಗೆ ಸಣ್ಣ ಚಕ್ರಗಳ ರೂಪದಲ್ಲಿರಿಸಿ ಹಾಗೂ ಬ್ಯಾಗ್‌ನ ಬೀಡಿಂಗ್‌ನಲ್ಲಿ ಅಡಗಿಸಿಟ್ಟು ಚಿನ್ನ ಸಾಗಿಸಲಾಗಿದೆ. ರಹಸ್ಯ ಮಾಹಿತಿಯ ಆಧಾರದಲ್ಲಿ ಏರ್ ಕಸ್ಟಮ್ಸ್ ನಡೆಸಿದ ತಪಾಸಣೆಯಲ್ಲಿ ಚಿನ್ನ ಪತ್ತೆಯಾಗಿದೆ.

RELATED NEWS

You cannot copy contents of this page