ಮಂಜೇಶ್ವರ ಜಂಕ್ಷನ್‌ನಲ್ಲಿ ರಸ್ತೆ ದಾಟಲು ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭ

ಮಂಜೇಶ್ವರ: ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರು ಎರಡೂ ದಿಕ್ಕುಗಳಿಗೆ ದಾಟಲು ವ್ಯವಸ್ಥೆ ಮಾಡಿಕೊಡುವ ನಿಟ್ಟಿನಲ್ಲಿ ನಿರ್ಮಿಸ ಲಾಗುತ್ತಿರುವ ಪಾದಾಚಾರಿ ಮೇಲ್ಸೇ ತುವೆಯ ನಿರ್ಮಾಣ ಕಾಮಗಾರಿಗೆ ಚಾಲನೆ ದೊರಕಿತು.
ಕೆಲವರು ಮಂದಿ ರೈಲು ನಿಲ್ದಾಣದ ಸಮೀಪ ಫ್ಲೈಓವರ್ ಬೇ ಕೆಂಬ ಬೇಡಿಕೆ ಇಟ್ಟಿದ್ದರೂ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಹಾಗೂ ಊರಿನವರು ಬೇಡಿಕೆ ಇಟ್ಟಿದ್ದ ಸ್ಥಳದಲ್ಲೇ ಇದೀಗ ಕಾಮಗಾರಿ ಆರಂಭಗೊAಡಿರುವುದನ್ನು ಹೋರಾಟ ಕ್ರಿಯಾ ಸಮಿತಿ ಹಾಗೂ ಊರವರು ಸ್ವಾಗತಿಸಿದ್ದಾರೆ.
ಈ ಪಾದಾಚಾರಿ ಮೇಲ್ಸೇತುವೆ ನಿರ್ಮಾಣದಿಂದಾಗಿ ಜಂಕ್ಷನಿನಲ್ಲಿ ಇರುವ ವಾಹನ ದಟ್ಟನೆ ಸಮಸ್ಯೆ ದೂರವಾಗಿ, ಸುಗಮ ಸಂಚಾರಕ್ಕೆ ಸಾಧ್ಯವಾಗಬಹುದೆಂಬ ನಿರೀಕ್ಷೆ ವ್ಯಕ್ತವಾಗಿದೆ. ಗೋವಿಂದ ಪೈ ಸರಕಾರಿ ಕಾಲೇಜು, ಕಣ್ಣೂರು ಕಾನೂನು ವಿಶ್ವವಿದ್ಯಾಲಯ ಎಂಬಿಡೆಗಳಿಗೆ ಸಾಗಲು ಆ ಭಾಗದಲ್ಲೂ ಒಂದು ಮೇಲ್ಸೇತುವೆಯನ್ನು ರೈಲು ನಿಲ್ದಾಣಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಮಾಡುವಂತೆಯೂ ಹೋರಾಟ ಸಮಿತಿ ಬೇಡಿಕೆ ಇಟ್ಟಿದೆ.ಕೆಲವೊಂದು ಮಂದಿಯ ಒತ್ತಡದಿಂದ ಗೋವಿಂದ ಪೈ ಕಾಲೇಜು ಪರಿಸರದಲ್ಲಿ ಮಾಡಬೇಕೆಂಬ ನಿರ್ಣಯವನ್ನು ಮಂಜೇಶ್ವರ ಪಂಚಾಯತ್ ಬೋರ್ಡ್ ಸಭೆಯಲ್ಲಿ ಅಂಗೀಕರಿಸಲಾಗಿದ್ದರೂ ಇದಕ್ಕೆ ಊರವರ ಭಾಗದಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಳಿಕ ಈಗಿನ ಸ್ಥಳವನ್ನೇ ಆಯ್ಕೆ ಮಾಡಲಾಗಿತ್ತು.

You cannot copy contents of this page