ಮಂಜೇಶ್ವರ ತಾಲೂಕಿಗೆ ದಶಕ: ಕಚೇರಿ ಚಟುವಟಿಕೆ ಇನ್ನೂ ಬಾಡಿಗೆ ಕಟ್ಟಡದಲ್ಲೇ: ಜನಪರವೇದಿ ಆಂದೆಲನದತ್ತ

ಉಪ್ಪಳ: ಮಂಜೇಶ್ವರ ತಾಲೂಕು ಚಾಲ್ತಿಗೆ ಬಂದು ದಶಕವಾದರೂ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿ ಸುವ ತಾಲೂಕು ಕಚೇರಿಗೆ ಸ್ವಂತ ವಾಗಿ ಕಟ್ಟಡ ಮಂಜೂರುಗೊಳಿಸಲು ಸಾಧ್ಯವಾಗದಿರುವುದು ಸರಕಾರ ಹಾಗೂ ಜನಪ್ರತಿನಿಧಿಗಳ ಸಂ ಪೂರ್ಣ ಅನಾಸ್ಥೆ ಎಂದು ಮಂಗ ಲ್ಪಾಡಿ ಜನಪರ ವೇದಿಕೆ ಪದಾ ಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ತಾಲೂಕು ಕಚೇರಿ ಹಾಗೂ ಸಂಬಂಧಪಟ್ಟ ಕಚೇರಿಗಳನ್ನು ಮಂಜೂರುಗೊಳಿಸದೆ ಭಾಷಾ ಅಲ್ಪಸಂಖ್ಯಾತರಲ್ಲಿ ಸರಕಾರ ತೀವ್ರ ಅವಗಣನೆಯನ್ನು ತೋರು ತ್ತಿದೆ. ಮಂಜೂರು ಮಾಡಿದ ಕಚೇರಿಗಳೆಲ್ಲಾ ಬಾಡಿಗೆ ಕಟ್ಟಡದಲ್ಲಿದ್ದು, ಇದರ ವಿರುದ್ಧ ಜನರನ್ನು ಸೇರಿಸಿ ತೀವ್ರ ಆಂದೋಲನ ನಡೆಸುವುದಾಗಿ ಜನಪರ ವೇದಿ ಎಚ್ಚರಿಸಿದೆ.

2024ರಲ್ಲಿ ತಾಲೂಕು ಮಂಜೂರು ಗೊಂಡ ಅಂದಿನಿಂದ ಉಪ್ಪಳದ ಖಾಸಗಿ ಕಟ್ಟಡದ ಮೇಲಂತಸ್ತಿನಲ್ಲಿ ಪ್ರಧಾನ ಕಚೇರಿಗಳು ಕಾರ್ಯಾಚರಿಸುತ್ತಿವೆ. ಲಿಫ್ಟ್ ಸೌಕರ್ಯ ಕೂಡಾ ಇಲ್ಲದ ಇಲ್ಲಿ ಪ್ರಾಯವಾದವರು, ಮಹಿಳೆಯರು, ರೋಗಿಗಳ ಸಹಿತವಿರುವವರು ಕಚೇರಿಯ ಮೆಟ್ಟಿಲುಗಳನ್ನು ಹತ್ತಲು ಬಹಳಷ್ಟು ಸಂಕಷ್ಟಪಡುತ್ತಿದ್ದಾರೆ. ಮಂಜೇಶ್ವರ ತಾಲೂಕಿನ ಜೊತೆಯಲ್ಲೇ ಮಂಜೂರಾದ ವೆಳ್ಳರಿಕುಂಡ್ ತಾಲೂಕು  ಎಲ್ಲಾ ರೀತಿಯಲ್ಲೂ ಪೂರ್ಣಸಜ್ಜುಗೊಂ ಡಿದೆ. ರಾಜ್ಯದಲ್ಲಿ ಹೊಸ ತಾಲೂಕು ಗಳಿಗೆ ಬೇಕಾಗಿ ಸರಕಾರ ತುರ್ತು ಚರ್ಚೆ, ತೀರ್ಮಾನಗಳನ್ನು ಕೈಗೊಳ್ಳುತ್ತಿರು ವಾಗ ಮಂಜೇಶ್ವರ ತಾಲೂಕನ್ನು ಮಾತ್ರ ಅವಗಣಿಸುತ್ತಿರುವುದು ವಂಚನೆಯಾಗಿದೆ ಎಂದು ಪದಾಧಿಕಾರಿಗಳು ಆರೋಪಿಸಿ ದರು.  ತಾಲೂಕು ಕಚೇರಿ ಕಾರ್ಯಾ ಚರಿಸಲು ಇರಬೇಕಾದ ಯಾವುದೇ ಸೌಕರ್ಯವಿಲ್ಲದ ಕಟ್ಟಡದಲ್ಲಿ ಕಟ್ಟಡ ಮಾಲಕನ ಆಸಕ್ತಿಗೆ ಅನುಸಾರವಾಗಿ ಕಚೇರಿ ಸೌಕರ್ಯವನ್ನು ಸಿದ್ಧಪಡಿಸ ಲಾಗಿದೆ. ಇದರಿಂದ ಜನಸಾಮಾನ್ಯರು ಕಚೇರಿಗೆ ತಲುಪಿದರೆ ಸಮಸ್ಯೆಗೆ ತುತ್ತಾ ಗುತ್ತಾರೆ. ಮಂಜೇಶ್ವರದ ಜನತೆಯೊಂ ದಿಗೆ ಎಂದೂ ಅವಗಣನೆ ಮಾತ್ರವೇ ತೋರುತ್ತಿರುವ ಸರಕಾರ ಜನರ ಸಂಕಷ್ಟವನ್ನು ಕಂಡೂ ಕಾಣದೆ ವರ್ತಿ ಸುತ್ತಿರುವುದಾಗಿ ಸಮಿತಿ ಆರೋಪಿಸಿದೆ.  ಈ ಬಾರಿಯ ಮುಂಗಡಪತ್ರದಲ್ಲೂ ಮಂಜೇಶ್ವರ ತಾಲೂಕಿನ ಬಗ್ಗೆ ಪರಾಮರ್ಷೆ  ನಡೆಸಿಲ್ಲ. ತಾಲೂಕು ಆಧಾರದಲ್ಲಿ ಜ್ಯಾರಿಗೆ ಬಂದ ಸಪ್ಲೈ ಕಚೇರಿ, ತಾಲೂಕು ಆಸ್ಪತ್ರೆ ಎಂಬಿವುಗಳ ಸ್ಥಿತಿಯೂ ಇದೇ ಆಗಿದೆ. ನ್ಯಾಯಾಲಯದ ಸಮುಚ್ಛಯ, ಸಬ್ ಜೈಲ್, ಡಿವೈಎಸ್‌ಪಿ ಕಚೇರಿ, ಆರ್‌ಟಿಒ ಕಚೇರಿ ಮೊದಲಾದ ಸಂಬಂಧಪಟ್ಟ ಸಂಸ್ಥೆಗಳು ಎಂದು ಜ್ಯಾರಿಯಾಗಲಿದೆ ಎಂಬ ಬಗ್ಗೆಯೂ ಸ್ಪಷ್ಟತೆಯಿಲ್ಲ. ಇನ್ನು ಈ ಅವಗಣನೆ ಮುಂದುವರಿಸಿದರೆ ಆಂದೋಲನ ದೊಂದಿಗೆ ಮುಂದುವರಿಯುವುದಾಗಿ ಜನಪರ ವೇದಿ ಪದಾಧಿಕಾರಿಗಳಾದ ಅಬು ತಮಾಮ್, ಸಿದ್ದಿಕ್ ಕೈಕಂಬ, ಅಶಾಫ್ ಮೂಸ, ಶಾಜಹಾನ್, ಶಂಸು ಕುಬಣೂರು, ಸಾಜನ್ ಕುಕ್ಕಾರ್ ಮೊದಲಾದವರು ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.

Leave a Reply

Your email address will not be published. Required fields are marked *

You cannot copy content of this page