ಮಂಜೇಶ್ವರ ಪ್ರಾಥಮಿಕ ಸಹಕಾರಿ ಕೃಷಿ, ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಕಟ್ಟಡ ಉದ್ಘಾಟನೆ

ಉಪ್ಪಳ: ಮಂಜೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ  ನಯಾ ಬಜಾರ್‌ನ ಅಂ ಬಾರು ಚೆರುಗೋಳಿ ರಸ್ತೆ ಸಮೀಪ ನಿರ್ಮಿಸಿದ ನೂತನ ಕಟ್ಟಡವನ್ನು  ರಾಜ್ಯ ವಿಧಾನಸಭಾ ವಿಪಕ್ಷ ನಾಯಕ ವಿ.ಡಿ. ಸತೀಶನ್ ಉದ್ಘಾಟಿಸಿದರು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಸಾಬು ಅಬ್ರಹಾಂ, ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷೆ ಶಮೀನಾ ಟೀಚರ್, ಮಂಗಲ್ಪಾಡಿ ಗ್ರಾ.ಪಂ. ಅಧ್ಯಕ್ಷೆ  ರುಬಿನಾ ನೌಫಲ್, ಜಿ.ಪಂ. ಸದಸ್ಯ ಗೋಲ್ಡನ್ ಅಬ್ದುಲ್ ರಹಿಮಾನ್, ಕೋ-ಆಪರೇಟಿವ್ ಯೂನಿಯನ್ ಕಾಸರಗೋಡು ಸರ್ಕಲ್ ಅಧ್ಯಕ್ಷ ಕೆ.ಆರ್. ಜಯಾನಂದ, ಶ್ರೀವಿದ್ಯಾ ವಿ.ವಿ, ದಿವ್ಯಾ ಕೆ.ಬಿ, ಸೋಜನ್ ಜೋಸೆಫ್, ರವಿಪ್ರಸಾದ್, ಮಂಗ ಲ್ಪಾಡಿ ಪಂ. ಸದಸ್ಯ ಬಾಬು ಬಂದ್ಯೋಡು ಮೊದಲಾದವರು ಶುಭಾಶಂಸನೆಗೈದರು. ಬ್ಯಾಂಕ್‌ನ ಅಧ್ಯಕ್ಷ ಸೋಮಶೇಖರ್ ಜೆ.ಎಸ್ ಸ್ವಾಗತಿಸಿ, ಉಪಾಧ್ಯಕ್ಷ ಮಂಜುನಾಥ ಆಳ್ವ ಮಡ್ವ ವಂದಿಸಿದರು. ಅಶ್ರಫ್ ಮರ್ತ್ಯ ನಿರೂಪಣೆಗೈದರು.

RELATED NEWS

You cannot copy contents of this page