ಮಂಜೇಶ್ವರ ಲಾಡ್ಜ್‌ನಲ್ಲಿ ಎಂಡಿಎಂಎ ಬೇಟೆ: ಇಬ್ಬರು ಆರೋಪಿಗಳನ್ನು 3 ದಿನಕ್ಕೆ ಪೊಲೀಸ್ ಕಸ್ಟಡಿಗೆ

ಕಾಸರಗೋಡು: ಮಂಜೇಶ್ವರ ಲಾಡ್ಜ್‌ನಿಂದ 013.28 ಗ್ರಾಂ ಎಂಡಿಎಂಎ ಹಾಗೂ 7,22,070 ರೂಪಾಯಿ ವಶಪಡಿಸಿದ ಪ್ರಕರಣದ ಆರೋಪಿಗಳನ್ನು ಮೂರು ದಿನಗಳ ಕಾಲಕ್ಕೆ ಪೊಲೀಸ್ ಕಸ್ಟಡಿಗೆ ಬಿಟ್ಟುಕೊಡಲಾಗಿದೆ. ಕುಂಜತ್ತೂರು ಮಾಡ ಖಲೀಲ್ ಮಂಜಿಲ್‌ನ ಮುಹಮ್ಮದ್ ಅನ್ವರ್ (36), ಬೆಳ್ತಂಗಡಿ ಕಾಳಿಯ ಗ್ರಾಮ ನಿವಾಸಿ ಮುಹಮ್ಮದ್ ಮನ್ಸೂರ್ (29) ಎಂಬಿವರನ್ನು ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಇ. ಅನೂಬ್ ಕುಮಾರ್‌ರ ಕಸ್ಟಡಿಗೆ ಬಿಡಲಾಗಿದೆ. ಮಾರ್ಚ್ ೨೦ರಂದು ಬೆಳಿಗ್ಗೆ 10.50೦ಕ್ಕೆ ಈ ಇಬ್ಬರನ್ನು ಲಾಡ್ಜ್‌ನಿಂದ ಸೆರೆ ಹಿಡಿಯಲಾಗಿತ್ತು.  ಇವರನ್ನು ತನಿಖೆಗೊಳಪಡಿಸಿದಾಗ ಮಾದಕ ವಸ್ತು ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿಗಳು ಲಭಿಸಿತ್ತು. ಪೊಲೀಸರು ನಡೆಸಿದ ತನಿಖೆಯಲ್ಲಿ ಸೆರೆಗೀಡಾದ ಬೆಳ್ತಂಗಡಿ ನಿವಾಸಿ ಮೊಹಮ್ಮದ್ ಮನ್ಸೂರ್‌ಗೆ ಅಂತಾರಾಜ್ಯ ಮಾದಕ ವಸ್ತು ಸಾಗಾಟ ತಂಡದೊಂದಿಗೆ ನಂಟು ಇರುವ ಸೂಚನೆ ಲಭಿಸಿತ್ತು. ಪ್ರಮುಖರ ಸಹಿತ ಹಲವರಿಗೆ ಈ ತಂಡ ಮಾದಕ ವಸ್ತು ತಲುಪಿಸಿರುವುದಾಗಿಯೂ ಮಾಹಿ ತಿ ಲಭಿಸಿತ್ತು. ಲಾಡ್ಜ್ ಕೊಠಡಿಯಿಂದ ವಶಪಡಿಸಿದ ಹಣ ಮಾದಕ ವಸ್ತು ವ್ಯವಹಾರದಿಂದ ಲಭಿಸಿದುದಾಗಿದೆ ಎಂದು ಸಂಶಯಿಸ ಲಾಗಿದೆ. ಕಸ್ಟಡಿಗೆ ಲಭಿಸಿದ ಆರೋಪಿ ಗಳನ್ನು ಸಮಗ್ರ ತನಿಖೆಗೊಳಪಡಿಸು ವುದರೊಂದಿಗೆ ಹೆಚ್ಚಿನ ಮಾಹಿತಿಗಳು ಲಭಿಸಬಹುದೆಂಬ ನಿರೀಕ್ಷೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

You cannot copy contents of this page