ಮಂಜೇಶ್ವರದಿಂದ ನಾಪತ್ತೆಯಾದ ಇಷಾ ಆಯಿಷ ಸಾರಾಳಾಗಿ ವಾಪಸು

ಕಾಸರಗೋಡು: ನಾಪತ್ತೆ ಯಾಗಿದ್ದ ಯುವತಿ ಮತಾಂತರ ಗೊಂಡು ಪ್ರಿಯತಮನನ್ನು ವಿವಾಹವಾಗಿದ್ದಾಳೆ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಪರಿಸರ ಪ್ರದೇಶಗಳಲ್ಲೂ ಜಾಗ್ರತೆ ಪಾಲಿಸಬೇಕೆಂದು ರಹಸ್ಯ ತನಿಖಾ ಏಜೆನ್ಸಿಗಳು ಮುನ್ನೆಚ್ಚರಿಕೆ ನೀಡಿವೆ.

ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ 24ರ ಹರೆಯದ ಇಷಾ ಎಂಬ ಹೆಸರಿನ ಯುವತಿ ಜೂನ್ 7ರಂದು ನಾಪತ್ತೆಯಾಗಿ ದ್ದಳು. ಈ ಬಗ್ಗೆ ಮನೆಯವರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದ ಮಧ್ಯೆ ಇಷಾ ಇನ್ನೊಂದು ಹೆಸರು ಸ್ವೀಕರಿಸಿ ಉಳ್ಳಾಲ ನಿವಾಸಿಯಾದ ಯುವಕನನ್ನು ವಿವಾಹವಾಗಿ ಹಿಂತಿರುಗಿದ್ದಾಳೆ.

ಆಯಿಷ ಸಾರ ಎಂಬುದು ಯುವತಿಯ ಈಗಿನ ಹೆಸರಾಗಿದೆ. ಬೆಂಗಳೂರಿನಲ್ಲಿ ಇವರಿಬ್ಬರ ವಿವಾಹ ನಡೆದಿದೆ ಎಂದು ಪೊಲೀಸ್ ತನಿಖೆಯಿಂದ ಪತ್ತೆ ಹಚ್ಚಲಾಗಿದೆ. ಇದೇ ವೇಳೆ ಇಷಾ ಎರಡು ವರ್ಷದ ಹಿಂದೆಯೇ ಮತಾಂ ತರಗೊಂಡಿರುವುದಾಗಿಯೂ ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಸುತ್ತಿದ್ದಾರೆ.

RELATED NEWS

You cannot copy contents of this page