ಮಗುವನ್ನು ಕೊಂದು ತ್ಯಾಜ್ಯ ರಾಶಿಗೆಸೆದ ಘಟನೆ: ೪ ಮಂದಿ ಸೆರೆ

ತಿರೂರು: ಗೃಹಿಣಿಯಾದ ಯುವತಿ ಹಾಗೂ ಪ್ರಿಯತಮ ಮತ್ತು ಪ್ರಿಯತಮನ ತಂದೆ, ತಾಯಿ ಸೇರಿ ಹನ್ನೊಂದು ತಿಂಗಳು ಪ್ರಾಯದ ಮಗುವನ್ನು ಕ್ರೂರವಾಗಿ  ಹಲ್ಲೆನಡೆಸಿ ಕೊಲೆಗೈದು ಮೃತದೇಹವನ್ನು ಉಪೇಕ್ಷಿಸಿದ ಘಟನೆ ನಡೆದಿದೆ.  ಯುವತಿ ನೀಡಿ ಹೇಳಿಕೆ ಪ್ರಕಾರ ನಡೆಸಿದ ತನಿಖೆ ಯಲ್ಲಿ ಮಗುವಿನ ಮೃತದೇಹವನ್ನು ತೃಶೂ ರು ರೈಲ್ವೇ ನಿಲ್ದಾಣದ ತ್ಯಾಜ್ಯಕೊಪ್ಪೆಯಿಂದ ಪತ್ತೆಹಚ್ಚಲಾಗಿದೆ.  ಘಟನೆಯಲ್ಲಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನ ತಾಯಿ ತಮಿಳುನಾಡು ಕಡಲೂರು ನೈವೇಲಿ ನಿವಾಸಿ ಶ್ರೀಪ್ರಿಯಾ (೧೯), ಪ್ರಿಯತಮ ಜಯಸೂರ್ಯನ್ (೨೩), ಈತನ ತಂದೆ ಕುಮಾರ್ (೫), ತಾಯಿ ಉಷಾ (೩೯) ಎಂಬಿವರನ್ನು ಪೊಲೀಸರು ಬಂಧಿಸಿದ್ದಾರೆ.

You cannot copy contents of this page