ಮಧೂರು ಕ್ಷೇತ್ರ ಮಹಾದ್ವಾರ ನಿರ್ಮಾಣಕ್ಕೆ ಶಿಲಾನ್ಯಾಸ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಮುಂಬಯಿಯ ಪ್ರಮುಖ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರು ನೂತನವಾಗಿ ನಿರ್ಮಿಸುವ ಮಹಾದ್ವಾರದ ಶಿಲಾನ್ಯಾಸ ಕಾರ್ಯಕ್ರಮ ಇಂದು ಬೆಳಿಗ್ಗೆ ನಡೆಯಿತು.  ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ, ಕೊಂಡೆವೂರು ಮಠದ ಶ್ರೀಯೋಗಾ ನಂದ ಸರಸ್ವತೀ ಸ್ವಾಮೀಜಿ ಮೊದಲಾದವರ ಉಪಸ್ಥಿತಿ ಯಲ್ಲಿ ಶಿಲಾನ್ಯಾಸ ನಡೆಸಲಾಯಿತು.  ಪ್ರಮುಖರಾದ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯ ಕ್ಷರೂ, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಶ್ರೀಕೃಷ್ಣ ಉಪಾಧ್ಯಾಯ, ಜಯದೇವ ಖಂಡಿಗೆ, ಯು.ಟಿ. ಆಳ್ವ, ತಂತ್ರಿವರ್ಯ ಬ್ರಹ್ಮಶ್ರೀ ಉಳಿಯ ತ್ತಾಯ ವಿಷ್ಣು ಆಸ್ರ, ಪಂ. ಅಧ್ಯಕ್ಷ ಗೋಪಾಲಕೃಷ್ಣ, ದೇವಸ್ವಂ ಮಂಡಳಿಯ ಬಿಜು, ಶ್ರೀಜಿತ್, ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಕೆ.ಕೆ. ಶೆಟ್ಟಿ, ಕೊಟ್ಟಾರ ವಾಸುದೇವನ್, ಮೋನಪ್ಪ ಭಂಡಾರಿ, ಶಶಿಧರ ಶೆಟ್ಟಿ, ಡಾ| ಬಿ.ಎಸ್. ರಾವ್, ಸ್ಮಿಜಾ ವಿನೋದ್ ಮೊದಲಾದವರು ಉಪಸ್ಥಿತರಿದ್ದರು.

You cannot copy contents of this page