ಮನೆಗೆ ಕಿಚ್ಚಿಟ್ಟ ಆರೋಪಿ ಸೆರೆ

ಕಾಸರಗೋಡು: ಪಳ್ಳಿಕ್ಕೆರೆ ಪೂಚಕ್ಕಾಡ್‌ನಲ್ಲಿ ಮನೆಗೆ ಕಿಚ್ಚಿಟ್ಟ ಪ್ರಕರಣದ ಮುಖ್ಯ ಆರೋಪಿಯನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಪೂಚಕ್ಕಾಡ್ ತೆಕ್ಕುಪುರದ ನಾಸರ್ ಎಂಬಾತ ಬಂಧಿತ ಆರೋಪಿ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಫೆಬ್ರವರಿ ೧೧ರಂದು ರಾತ್ರಿ 1.45ರ ವೇಳೆ  ಪೂಚಕ್ಕಾಡ್‌ನ ಫೈಸಲ್ ಎಂಬವರ ಮನೆಗೆ  ಕಿಚ್ಚಿಡಲಾಗಿತ್ತು. ಬೈಕ್‌ನಲ್ಲಿ ತಲುಪಿದ ತಂಡ ಸಿಟೌಟ್‌ನಲ್ಲಿದ್ದ ಸೋಫಾ ಸೆಟ್‌ಗೆ ಪೆಟ್ರೋಲ್ ಸುರಿದು  ಕಿಚ್ಚಿಟ್ಟಿರುವುದಾಗಿ ದೂರಲಾಗಿದೆ.

You cannot copy contents of this page