ಮನೆಯ ಕೊಠಡಿಯೊಳಗೆ ಸಿಲುಕಿಕೊಂಡ ಮಗು: ರಕ್ಷಿಸಿದ ಅಗ್ನಿಶಾಮಕದಳ

ಉಪ್ಪಳ: ಮನೆಯ ಕೊಠಡಿಯೊಳಗೆ ತೆರಳಿದ ಎರಡು ವರ್ಷದ ಹೆಣ್ಣುಮಗು ಬಾಗಿಲಿನ ಚಿಲಕ ಹಾಕಿದ್ದು ಬಳಿಕ ತೆಗೆಯಲಾಗದೆ ಸಂಕಷ್ಟಕ್ಕೀಡಾದ ಘಟನೆ ನಡೆದಿದೆ. ವಿಷಯ ತಿಳಿದು ತಲುಪಿದ ಉಪ್ಪಳ ಅಗ್ನಿಶಾಮಕದಳ ಬಾಗಿಲು ತೆರೆದು ಮಗುವನ್ನು ಸಂಬಂಧಿಕರಿಗೆ ಒಪ್ಪಿಸಿದೆ. ಉಪ್ಪಳ ಕೋಡಿಬಯಲಿನ ಮನೆಯೊಂ ದರಲ್ಲಿ ನಿನ್ನೆ ಅಪರಾಹ್ನ ೩.೪೫ರ ವೇಳೆ ಈ ಘಟನೆ ನಡೆದಿದೆ.

ಮನೆ ಮಂದಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ಮಗು ಬಾಗಿಲಿನ ಚಿಲಕ ಹಾಕಿದೆ. ಮಗು ಕಾಣದಾದುದರಿಂದ ತಾಯಿ ಸಹಿತ ಮನೆಯವರು ಹುಡುಕಾಡಿದಾಗ ಮಗು ಕೊಠಡಿಯೊಳಗೆ ಸಿಲುಕಿಕೊಂಡ ಬಗ್ಗೆ ತಿಳಿದು ಬಂದಿದೆ. ಕೂಡಲೇ ಮನೆಯವರು ಬಾಗಿಲು ತೆರೆಯಲೆತ್ನಿಸಿದರೂ ಸಾಧ್ಯವಾಗಲಿಲ್ಲ. ಕೊಠಡಿಯೊಳಗೆ ಸಿಲುಕಿಕೊಂಡ ಮಗು ಅಳತೊಡಗಿದ್ದು, ಇದರಿಂದ ಮನೆಯವರು ಸಂಕಷ್ಟಕ್ಕೊ ಗಾಗಿದ್ದಾರೆ. ಕೊನೆಗೆ ವಿಷಯವನ್ನು ಉಪ್ಪಳ ಅಗ್ನಿಶಾಮಕದಳಕ್ಕೆ ತಿಳಿಸಲಾಯಿತು. ಕೂಡಲೇ ಸ್ಟೇಷನ್ ಆಫೀಸರ್ ರಾಜೇಶ್ ಸಿ.ಪಿ. ನೇತೃತ್ವದಲ್ಲಿ ತಲುಪಿದ ಅಗ್ನಿಶಾಮಕದಳ ಸಿಬ್ಬಂದಿಗಳು ಬಾಗಿಲಿನ ಚಿಲಕವನ್ನು ಕಳಚಿ ತೆಗೆದು ಮಗುವನ್ನು ಕೊಠಡಿಯಿಂದ ಪಾರು ಮಾಡಿದರು.

RELATED NEWS

You cannot copy contents of this page