ಮನೆಯ ವಿದ್ಯುತ್ ಮೊಟಕುಗೊಳಿಸಿ ಮಹಿಳೆಗೆ ಹಲ್ಲೆ ನಡೆಸಿ ಚಿನ್ನದ ಸರ ಅಪಹರಣ

ಕಾಸರಗೋಡು: ರಾತ್ರಿ ವೇಳೆ ಮನೆಯ ಮೈನ್ ಸ್ವಿಚ್‌ನ ಫ್ಯೂಸ್  ತೆಗೆದ ಕಳ್ಳರು ಮನೆ ಮಾಲಕಿಯ ಮೇಲೆ ಹಲ್ಲೆ ನಡೆಸಿ ಆಕೆಯ ಕುತ್ತಿಗೆಯಲ್ಲಿದ್ದ ಎgಡು ಪವನ್‌ನ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ನಡೆದಿದೆ.

ಚಟ್ಟಂಚಾಲ್ ಸಮೀಪದ ಕಳನಾಡು ವಾಣಿಯಾರ್‌ಮೂಲೆಯ ನವಭಾರತ್ ಕ್ಲಬ್ ಬಳಿಯ ಕೆ. ಕಮಲ (53) ಎಂಬವರ ಚಿನ್ನದ ಸರವನ್ನು ಕಳ್ಳರು ಅಪಹರಿಸಿದ್ದಾರೆ.

ಕಳ್ಳರು ಮೊದಲು ಆ ಮನೆಯ  ಕರೆಂಟ್‌ನ ಫ್ಯೂಸ್ ತೆಗೆದು ವಿದ್ಯುತ್ ಮೊಟಕುಗೊಳಿಸಿದ್ದಾರೆ. ಕರೆಂಟ್ ಹೋದಾಗ ಕಮಲ ಹೊರಗೆ ಬಂದು ನೋಡಿದಾಗ ನೆರೆಮನೆಯಲ್ಲಿ ಕರೆಂಟ್ ಇರುವುದನ್ನು ಗಮನಿಸಿ ತಮ್ಮ ಮನೆಯ ಮೈನ್ ಸ್ವಿಚ್ ಬೋರ್ಡ್ ಪರಿಶೀಲಿಸಲೆಂದು ಹೋದಾಗ ಅಲ್ಲೇ ಅಡಗಿ ನಿಂತಿದ್ದ ಕಳ್ಳರು ಅವರ ಮೇಲೆ ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾರೆ.

ಬೀಡಿ ಕಾರ್ಮಿಕೆಯಾಗಿರುವ ಕಮಲ  ಏಕಾಂಗಿಯಾಗಿ ವಾಸಿಸು ತ್ತಿದ್ದಾರೆ. ಅವರ ಪತಿ ಗಣೇಶನ್ ವಿದೇಶದಲ್ಲಿ ಹಾಗೂ  ಪುತ್ರ ಬೇರೆಡೆ ಕಲಿಯುತ್ತಿದ್ದಾನೆ. ಕಳ್ಳರು ಮುಸುಕು ಧಾರಿಗಳಾಗಿ ಬಂದು  ಕಮಲರ ಮೇಲೆ ಹಲ್ಲೆ ನಡೆಸಿ ಸರ ಎಗರಿಸಿದ್ದು,  ಕಮಲ ಬೊಬ್ಬೆ  ಹಾಕಿದಾಗ ನೆರೆಮನೆಯವರು ಆಗಮಿಸಿದಾಗ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಬಗ್ಗೆ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

You cannot copy contents of this page