ಮನೆಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾದ ಗೃಹಿಣಿ ಮೃತ್ಯು
ಪೆರ್ಲ: ಮನೆಯೊಳಗೆ ಅರೆಪ್ರಜ್ಞಾ ವಸ್ಥೆಯಲ್ಲಿ ಕಂಡುಬಂದ ಗೃಹಿಣಿಯನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಪೆರ್ಲ ಬಳಿಯ ಬಜಕೂಡ್ಲುವಿನ ಮೋನಪ್ಪ ಪೂಜಾರಿಯವರ ಪತ್ನಿ ರತ್ನಾವತಿ (63) ಮೊನ್ನೆ ರಾತ್ರಿ ಮನೆಯೊಳಗೆ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಮನೆಯವರು ಆಸ್ಪತ್ರೆಗೆ ತಲುಪಿಸಿ ದರೂ ಅಷ್ಟರೊಳಗೆ ಸಾವು ಸಂಭವಿ ಸಿದೆ. ಬಳಿಕ ಮೃತದೇಹವನ್ನು ಕಾಸರ ಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂ ಧಿಕರಿಗೆ ಬಿಟ್ಟುಕೊಡಲಾಯಿತು. ಮೃತರು ಮಕ್ಕಳಾದ ನಾರಾಯಣ, ರೋಹಿಣಿ, ಅಳಿಯ ಸತೀಶ, ಸೊಸೆ ವಾರಿಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.