ಮನೆಯಲ್ಲಿ ನಿದ್ರಿಸುತ್ತಿದ್ದ ಬಾಲಕಿಯನ್ನು ಅಪಹರಿಸಿ ದೌರ್ಜನ್ಯ ಯತ್ನ

ಹೊಸದುರ್ಗ: ಮನೆಯೊಳಗೆ ನಿದ್ರಿಸುತ್ತಿದ್ದ ಒಂಭತ್ತರ ಹರೆಯದ  ಬಾಲಕಿಯನ್ನು ಅಪಹರಿಸಿ ದೌರ್ಜನ್ಯಕ್ಕೆ ಯತ್ನಿಸಿದ ಬಳಿಕ ದುಷ್ಕರ್ಮಿ ಚಿನ್ನಾಭರಣವನ್ನು ತೆಗೆದು ರಸ್ತೆ ಬದಿ ಉಪೇಕ್ಷಿಸಿದ ಘಟನೆ ನಡೆದಿದೆ.

ದುಷ್ಕರ್ಮಿ ಅಲ್ಲಿಂದ ತೆರಳಿದ ಬಳಿಕ ಬಾಲಕಿ ಸಮೀಪದ ಮನೆಗೆ ತೆರಳಿದ್ದಾಳೆ. ಕಾಲಿಂಗ್ ಬೆಲ್ ನ ಶಬ್ದ ಕೇಳಿ ಎಚ್ಚೆತ್ತ ಮನೆಯವರು ಬಾಲಕಿಯನ್ನು ವಿಚಾರಿಸಿದಾಗ ಘಟನೆ ತಿಳಿದುಬಂದಿದೆ.

ಇಂದು ಮುಂಜಾನೆ ೩ ಗಂಟೆ ವೇಳ ಪಡನ್ನಕ್ಕಾಡ್ ಬಳಿ ಈ  ಘಟನೆ ನಡೆದಿದೆ. ಬಳಿಕ ಸಂಬಂ ಧಿಕರು ತಲುಪಿ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ತಲುಪಿಸಿ ತಪಾಸ ಣೆಗೊಳಪಡಿ ಸಲಾಯಿತು. ಬಾಲಕಿಯ ಕುತ್ತಿಗೆ ಸಹಿತ ವಿವಿಧೆಡೆ ಗಾಯಗಳು ಪತ್ತೆಯಾಗಿದೆಯೆಂದೂ ತಿಳಿಸಲಾಗಿದೆ.

ಮುಂಜಾನೆ ೩  ಗಂಟೆ ವೇಳೆ ಬಾಲಕಿಯ ತಂದೆ ಹಾಲು ಕರೆಯುವ ಕೆಲಸಕ್ಕೆ ತೆರಳಿದ್ದರು.  ಈ ಸಂದರ್ಭ ದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿ ನಿದ್ರಿಸಿದ್ದ ಬಾಲಕಿ ಯನ್ನು ಅಪಹರಿಸಿ ದ್ದಾನೆಂದು ಅಂದಾಜಿಸಲಾಗಿದೆ.  ಮನೆಯ ಇತರ ಮಂದಿ ನಿದ್ರೆಯಲ್ಲಿ ದ್ದುದರಿಂದ ಘಟನೆ ಅವರ ಅರಿವಿಗೆ ಬಂದಿಲ್ಲವೆನ್ನಲಾಗಿದೆ. ಘಟನೆ ಬಗ್ಗೆ ಕೇಸು ದಾಖಲಿಸಿಕೊಂಡ ಪೊಲೀಸರು ದುಷ್ಕರ್ಮಿಗಾಗಿ ಶೋಧ ಆರಂಭಿಸಿದ್ದಾರೆ.

You cannot copy contents of this page