ಮನೆಯಲ್ಲಿ ಹೆರಿಗೆ ವೇಳೆ ಯುವತಿ ಸಾವು: ಪತಿ ಸೆರೆ

ಮಲಪ್ಪುರಂ: ಪೆರುಂಬಾವೂರು ನಿವಾಸಿಯಾದ ಅಸ್ಮಾ ಎಂಬಾಕೆ ಮನೆಯಲ್ಲಿ ಹೆರಿಗೆ ವೇಳೆ ಸಾವಿಗೀಡಾದ ಘಟನೆಗೆ ಸಂಬಂಧಿಸಿ ಪತಿ ಸಿರಾಜು ದ್ದೀನ್ ಎಂಬಾತನ ವಿರುದ್ಧ ನರಹತ್ಯಾ ಆರೋಪ ಹೊರಿಸಿ ಬಂಧಿಸಲಾಗಿದೆ. ಆರೋಪಿಯ ಯೂಟ್ಯೂಬ್ ಚಾನೆಲ್ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.  ಅಸಹಜ ಸಾವು ಎಂದು ಆರಂಭದಲ್ಲಿ ಕೇಸು ದಾಖಲಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷಾ ವರದಿಯ ಆಧಾರದಲ್ಲಿ ನರಹತ್ಯಾ ಕೇಸು ದಾಖಲಿಸಲಾಗಿದೆ.

ಪೆರುಂಬಾವೂರು ನಿವಾಸಿಯಾದ ಅಸ್ಮಾ ಎಂಬಾಕೆ 5ನೇ ಹೆರಿಗೆ ವೇಳೆ ಮನೆಯಲ್ಲಿ ಮೃತಪಟ್ಟಿದ್ದಳು. ಅಪರಿಮಿತ ರಕ್ತಸ್ರಾವವೇ ಸಾವಿಗೆ ಕಾರಣವೆಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page