ಮರದ ರೆಂಬೆಯಲ್ಲಿ ಗಂಡಸಿನ  ಜೀರ್ಣಿಸಿದ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಮರದ  ರೆಂಬೆಯಲ್ಲಿ  ಗಂಡಸೋರ್ವರ ಜೀರ್ಣಿಸಿದ ಮೃತದೇಹ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ನಿನ್ನೆ  ಸಂಜೆ ಪತ್ತೆಯಾಗಿದೆ. ಪೊಯಿನಾಚಿಗೆ ಸಮೀಪದ ಕರಿಚ್ಚೇರಿ ರಾಮಂಚಿರದ ಹಳೆಯ ಕೆಂಪುಕಲ್ಲು ಕೋರೆ ಬಳಿಯ ಮಾವಿನ ರೆಂಬೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹ ತೀವ್ರ ಜೀರ್ಣಿಸಿದ ಸ್ಥಿತಿಯಲ್ಲಿತ್ತು. ಇದರಿಂದಾಗಿ ವಾರದ ಹಿಂದೆ ಈ ವ್ಯಕ್ತಿ ಸಾವನ್ನಪ್ಪಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಗೆ ಸುಮಾರು ೫೦ ವರ್ಷ ಪ್ರಾಯ ಅಂದಾಜಿಸಲಾಗಿದೆ. ಅವರು  ಧೋತಿ ಮತ್ತು ನೀಲಿ ಅಂಗಿ ಧರಿಸಿದ್ದರು. ನೀಳ ಕೇಶವನ್ನು ಹೊಂದಿದ ಈ ವ್ಯಕ್ತಿಯ ಗುರುತು ಪಚ್ಚೆಹಚ್ಚಲು ಸಾಧ್ಯವಾಗಿಲ್ಲ.

ಬೇಕಲ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದರು. ಮೃತದೇಹವನ್ನು ಬಳಿಕ ಜಿಲ್ಲಾ ಸರಕಾರಿ ಆಸ್ಪ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.

You cannot copy contents of this page