ಮರೆವು ರೋಗಿಯ ಉಂಗುರ ಅಪಹರಿಸಿದ ನೆರೆಮನೆ ನಿವಾಸಿ ಸೆರೆ

ಕಾಸರಗೋಡು: ನೆನಪುಶಕ್ತಿ ಕಡಿಮೆಯಿರುವ ಮಧ್ಯವಯಸ್ಕನ ಮುಕ್ಕಾಲುಪವನ್‌ಗೂ ಅಧಿಕ ತೂಕದ ಚಿನ್ನದ ಉಂಗುರವನ್ನು ಅಪಹರಿಸಿದ ನೆರೆಮನೆಯ ನಿವಾಸಿಯನ್ನು ಬಂಧಿಸಲಾಗಿದೆ. ಅಜಾನೂರು ಆವಿಕ್ಕಲ್ ಮುಟ್ಟುಂದಲ ಹೌಸ್‌ನ ಎಂ. ಶಶಿಧರನ್ (೬೬) ಬೆರಳಲ್ಲಿ ಧರಿಸಿದ್ದ ಉಂಗುರವನ್ನು ತೆಗೆದ ನೆರೆಮನೆ ನಿವಾಸಿ ಪ್ರಕಾಶನ್ (೪೫)ನನ್ನು ಬಂಧಿಸಲಾಗಿದೆ. ಶಶಿಧರನ್‌ರ ಪುತ್ರ ಎಂ. ಸಜೇಶ್ ಕೊಲ್ಲಿಯಿಂದ  ಬಂದಾಗ ಉಂಗುರ ಹಾಕಿದ್ದರು. ಗುರುವಾರ ಮಧ್ಯಾಹ್ನವೇಳೆ ಈ ಉಂಗುರ ಕಾಣೆಯಾಗಿದೆ. ಈ ವೇಳೆ ಪ್ರಕಾಶನ್ ಶಶಿಧರನ್‌ರ ಮನೆಯಲ್ಲಿದ್ದರ. ಉಂಗುರ ನಾಪತ್ತೆಯಾದ ಬಳಿಕ ಸಜೇಶ್ ಪ್ರಕಾಶನ್‌ನ ಚಲನವಲನ ನಿರೀಕ್ಷಿಸುತ್ತಿದ್ದರು. ಬಳಿಕ ಶಂಕೆಗೊಂಡು ಆತನನ್ನು ಸಜೇಶ್ ಪೊಲೀಸರಿಗೊಪ್ಪಿಸಿದ್ದು, ಪೊಲೀಸರ ವಿಚಾರಣೆ ವೇಳೆ ಕಳವುಗೈದ ಬಗ್ಗೆ ಪ್ರಕಾಶನ್ ಬಾಯ್ಬಿಟ್ಟಿದ್ದು, ಅದನ್ನು ಕಾಞಂಗಾಡ್‌ನ ಜ್ಯುವೆಲ್ಲರಿಗೆ ಮಾರಿದ್ದಾಗಿ ತಿಳಿಸಿದ್ದಾನೆ. ಬಳಿಕ ಜ್ಯುವೆಲ್ಲರಿಯಿಂದ ಉಂಗುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

You cannot copy contents of this page