ಮಲಿನಜಲ ಸಾರ್ವಜನಿಕ ಸ್ಥಳಕ್ಕೆ ಹರಿಯಬಿಟ್ಟ ವ್ಯಕ್ತಿಯ ವಿರುದ್ಧ ಕೇಸು

ದೇಲಂಪಾಡಿ: ಕಸಾಯಿಖಾನೆಯ ತ್ಯಾಜ್ಯ ಹಾಗೂ ಮಲಿನ ಜಲವನ್ನು ಸಾರ್ವಜನಿಕ ಸ್ಥಳಕ್ಕೆ  ಹರಿಯಬಿಟ್ಟ ಆರೋಪದಲ್ಲಿ ಓರ್ವನ ವಿರುದ್ಧ ಕೇಸು ದಾಖಲಿಸಲಾಗಿದೆ. ದೇಲಂಪಾಡಿ ಮಯ್ಯಳ ಹೌಸ್‌ನ ಜಲಾಲುದ್ದೀನ್ (30) ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ಆದೂರು ಎಸ್‌ಐ ವಿನೋದ್ ಕುಮಾರ್ ನಿನ್ನೆ ಮಧ್ಯಾಹ್ನ ನೇರವಾಗಿ ಸ್ಥಳಕ್ಕೆ ತೆರಳಿದಾಗ ಹಟ್ಟಿ ಸಮೀಪದ ಈತನ ಹಿತ್ತಿಲಿನ ಪರಿಸರದಲ್ಲಿ ತ್ಯಾಜ್ಯ ಸಹಿತ ಕಸಾಯಿಖಾನೆಯ ಮಲಿನ ಜಲವನ್ನು ಹರಿಯಬಿಟ್ಟಿರುವುದು ಕಂಡು ಬಂದಿದ್ದು, ಈ ಬಗ್ಗೆ ಆರೋಪಿ ವಿರುದ್ಧ ಕೇಸು ದಾಖಲಿಸಿಲುವುದಾಗಿ ಆದೂರು ಪೊಲೀಸರು ತಿಳಿಸಿದ್ದಾರೆ.

You cannot copy contents of this page