ಮಲೆನಾಡು ಹೆದ್ದಾರಿಯಲ್ಲಿ ಗುಡ್ಡೆ ಕುಸಿತ : ಅಂಗಡಿಮೊಗರು ಶಾಲೆ, 10ರಷ್ಟು ಮನೆಗಳಿಗೆ ಬೆದರಿಕೆ
ಸೀತಾಂಗೋಳಿ: ತೀವ್ರ ಮಳೆ ಮುಂದುವರಿಯು ತ್ತಿರುವ ಹಿನ್ನೆಲೆಯಲ್ಲಿ ಪುತ್ತಿಗೆ, ಅಂಗಡಿಮೊಗರು ಶಾಲೆ ಸಮೀಪ ಗುಡ್ಡೆ ಕುಸಿಯುವ ಬೆದರಿಕೆ ಉಂಟಾಗಿದೆ. ರಸ್ತೆ ನಿರ್ಮಾಣಕ್ಕಾಗಿ ಗುಡ್ಡೆಯಿಂದ ಅವೈಜ್ಞಾನಿಕವಾಗಿ ಮಣ್ಣು ಸಂಗ್ರಹಿಸಿರುವುದೇ ಗುಡ್ಡೆ ಕುಸಿಯಲು ಕಾರಣವೆನ್ನಲಾಗುತ್ತಿದೆ. ಗುಡ್ಡೆಯಲ್ಲಿ ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಹಾಗೂ ಅದರ ಸಮೀಪದಲ್ಲಿ ಕಳಗೆ ಹಲವಾರು ಮನೆಗಳು ಇದ್ದು, ಇದರ ಮಧ್ಯದಲ್ಲೇ ಮಲೆನಾಡು ಹೆದ್ದಾರಿ ಸಾಗುತ್ತಿದೆ. ಶಾಲೆಯಿದ್ದ ಭಾಗದಿಂದ ಮಣ್ಣು ತೆಗೆದಿದ್ದು, ಇಲ್ಲಿ ಸಣ್ಣ ಮಟ್ಟಿನಲ್ಲಿ ಕುಸಿತ ಆರಂಭಗೊಂಡಿರುವುದು ಬೆದರಿಕೆ ಸೃಷ್ಟಿಗೆ ಕಾರಣವಾಗಿದೆ. ಕಿಫ್ಬಿ ನಿಧಿ ಉಪಯೋಗಿ ನಿರ್ಮಿಸಿದ ರಸ್ತೆಯಲ್ಲಿ ಸೂಕ್ತವಾದ ಸಂರಕ್ಷಣಾ ಭಿತ್ತಿ ಇಲ್ಲದಿರುವುದು ಸಮಸ್ಯೆಯೆಂದು ಸ್ಥಳೀಯರು ತಿಳಿಸುತ್ತಾರೆ. ಮಣ್ಣು ಕುಸಿಯುವ ಭೀತಿ ನೆಲೆಗೊಂಡಿರುವ ಭಾಗಗಳಲ್ಲಿ ಎತ್ತರದಲ್ಲಿ ಸಂರಕ್ಷಣಾ ಭಿತ್ತಿ ನಿರ್ಮಿಸಬೇಕೆಂದು ಆಗ್ರಹಿಸಿ ಕಳೆದ ವರ್ಷ ಲೋಕೋಪಯೋಗಿ ಸಚಿವ, ಕೆಆರ್ಎಫ್ಬಿ ಅಧಿಕಾರಿಗಳಿಗೆ ಹಾಗೂ ಶಾಸಕ ಎಕೆಎಂ ಅಶ್ರಫ್ರಿಗೆ ದೂರು ನೀಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಉಂಟಾಗಲಿಲ್ಲ. ಒಂದೂವರೆ ತಿಂಗಳ ಹಿಂದೆ ನಡೆದ ಜಿಲ್ಲಾ ಅಭಿವೃದ್ಧಿ ಸಮಿತಿಯಲ್ಲಿ ಶಾಸಕರು ಈ ಬಗ್ಗೆ ವಿಷಯ ಮಂಡಿಸಿದ್ದರು. ಪುತ್ತಿಗೆ ಪಂಚಾಯತ್ ಅಧ್ಯಕ್ಷರು ಕೂಡಾ ಈ ವಿಷಯದಲ್ಲಿ ಇಲಾಖೆಯ ಮಟ್ಟದಲ್ಲಿ ಪತ್ರ ನೀಡಿದ್ದರು.
ಅಂಗಡಿಮೊಗರು ಶಾಲೆಯ ಸಮೀಪ ಗುಡ್ಡೆ ಕುಸಿತ ಬೆದರಿಕೆ ನೆಲೆಗೊಂಡಿರುವ ಹಿನ್ನೆಲೆಯಲ್ಲಿ ಕೆಳಗಿನ ಭಾಗದ ಮನೆಮಂದಿಯನ್ನು ಅವರ ಸಂಬಂಧಿಕರ ಮನೆಗಳಿಗೆ ಸ್ಥಳಾಂತರ ಗೊಳ್ಳಲು ತಿಳಿಸಲಾಗಿದ್ದು, ಇದರಂತೆ ಎಂಟು ಕುಟುಂಬಗಳು ಇಲ್ಲಿಂದ ಸ್ಥಳಾಂತರಗೊಂ ಡಿವೆ. ೧೦ಕ್ಕೂ ಹೆಚ್ಚು ಮನೆಗಳಿಗೆ ಇಲ್ಲಿ ಬೆದರಿಕೆ ಉಂಟಾಗಿದೆ. ಮಾಹಿತಿ ತಿಳಿದೊಡನೆ ಸ್ಥಳಕ್ಕೆ ಶಾಸಕ ಎಕೆಎಂ ಅಶ್ರಫ್ ಭೇಟಿ ನೀಡಿ ಪರಿಶೀಲಿಸಿ ದ್ದಾರೆ. ವಿವಿಧ ಕಡೆಗಳಲ್ಲಿ ದುರಂತಗಳು ಪುನರಾವರ್ತನೆ ಯಾಗುತ್ತಿರುವಾಗ ಶೀಘ್ರವೇ ಇಲ್ಲಿ ಇನ್ನೊಂ ದು ದುರಂತ ಉಂಟಾಗದಂತೆ ಕ್ರಮ ಕೈಗೊ ಳ್ಳಲು ಮುಂಜಾಗ್ರತೆ ವಹಿಸಬೇ ಕೆಂದು ಶಾಸಕರು ವಿವಿಧ ಇಲಾಖೆ ಯ ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.