ಮಳೆ : ಹಲವೆಡೆ ಮಣ್ಣು ಕುಸಿತ; ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಗಳಲ್ಲಿ ವಾಹನ ಸಂಚಾರ ಸಂದಿಗ್ಧತೆ

ಕಾಸರಗೋಡು:  ಮಳೆ ತೀವ್ರಗೊಳ್ಳುವುದರೊಂದಿಗೆ  ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗಳು ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆಗಳು ಕುಸಿದು ವಾಹನಗಳು ಮಣ್ಣಿನಲ್ಲಿ ಹೂತುಹೋಗುತ್ತಿದ್ದು,  ಮಳೆ ನೀರು ಅಲ್ಲಲ್ಲಿ ಕಟ್ಟಿ ನಿಂತು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಎದುರಾಗಿದೆ.    ನಿನ್ನೆ ರಾತ್ರಿ ಹಾಗೂ ಇಂದು ಬೆಳಿಗ್ಗೆ ಸುರಿದ ತೀವ್ರ ಮಳೆಯಿಂದ ಮಾವುಂಗಾಲ್ ಸರ್ವೀಸ್ ರಸ್ತೆ ಕುಸಿದು ಸಾರಿಗೆ ಅಡಚಣೆ ಉಂಟಾಗಿದೆ.  ಚೆಮ್ಮಟ್ಟಂವ ಯಲ್‌ನಲ್ಲಿ ಸೇತುವೆ ಕೆಲಸ ನಡೆಯುತ್ತಿರುವುದರಿಂದ ಆ ಮೂಲಕ ವಾಹನ ಸಂಚಾರ ನಿಲುಗಡೆಗೊಳಿ ಸಲಾಗಿದೆ. ಪೆರಿಯ, ಕುಟ್ಟಿಯಡ್ಕದಲ್ಲಿ ಕೇಂದ್ರ ವಿಶ್ವವಿದ್ಯಾಲಯ ಸಮೀಪ ಸರ್ವೀಸ್ ರಸ್ತೆಯಲ್ಲಿ ಮಣ್ಣು ಹಾಕಿದ ಭಾಗದಲ್ಲಿ ಕಣ್ಣೂರಿನಿಂದ ಬೆಳಿಗ್ಗೆ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ನ ಚಕ್ರಗಳು ಹೂತು ಹೋಗಿದೆ. ಇಲ್ಲಿ ಕೂಡಾ ಅರ್ಧ ಗಂಟೆ ಕಾಲ ವಾಹನ ಸಂಚಾರಕ್ಕೆ ತೊಡಕುಂಟಾ ಯಿತು. ಕಾಲಿಕಡವಿನಲ್ಲಿ ಸರ್ವೀಸ್ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.  ಪುಲ್ಲೂರಿನಲ್ಲೂ ಸರ್ವೀಸ್ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ. 

ಇದೇ ವೇಳೆ ಉತ್ತರ ಕೇರಳದಲ್ಲಿ ಮಳೆ ಇನ್ನಷ್ಟು ತೀವ್ರಗೊಳ್ಳಲಿ ದೆಯೆಂದು ಹವಾಮಾನ ಇಲಾಖೆ ತಿಳಿಸಿದೆ. ಕಾಸರಗೋಡು, ಕಣ್ಣೂರು, ವಯನಾಡು, ಕಲ್ಲಿಕೋಟೆ, ಮಲಪ್ಪುರಂ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಪತ್ತನಂತಿಟ್ಟ, ಆಲಪ್ಪುಳ, ಕೋಟ್ಟಯಂ, ಇಡುಕ್ಕಿ, ಎರ್ನಾಕುಳಂ, ತೃಶೂರು, ಪಾಲಕ್ಕಾಡ್ ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಾಸರಗೋಡು, ಕಣ್ಣೂರು, ವಯನಾಡು, ಕಲ್ಲಿಕೋಟೆ ಜಿಲ್ಲೆಗಳಲ್ಲಿ ನಾಳೆಯೂ ಆರೆಂಜ್ ಅಲರ್ಟ್ ಆಗಿರುವುದು.  ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗ್ರತೆ ಪಾಲಿ ಸಬೇಕೆಂದು ದುರಂತ ನಿವಾರಣಾ ಅಥಾರಿಟಿ ಮುನ್ಸೂಚನೆ ನೀಡಿದೆ.

ಮಳೆ ತೀವ್ರಗೊಳ್ಳುವುದರೊಂದಿಗೆ ಜಿಲ್ಲೆಯಲ್ಲಿ ಬತ್ತಿ ಬರಡಾಗಿದ್ದ ಕಂಬಾರು, ಪುತ್ತಿಗೆ ಸಹಿತ ವಿವಿಧ ಹೊಳೆಗಳಲ್ಲಿ ಈಗ ನೀರು ಹರಿದು ಹೋಗತೊಡಗಿದೆ. ಮಾಮೂಲಿಗಿಂತ ಮೊದಲೇ ಈ ವರ್ಷ ಮಳೆ ಬಿರುಸಾಗಿ ಸುರಿಯತೊಡ ಗಿರುವುದರಿಂದ ಜಲ ಮೂಲಗಳಲ್ಲಿ  ನೀರಿನ ಅಭಾವಕ್ಕೆ ಪರಿಹಾರ ಉಂಟಾಗಿದೆ. 

RELATED NEWS

You cannot copy contents of this page