ಮಹಿಳೆಯ ತಲೆಗೆ ಕಲ್ಲೆಸೆದು ಗಾಯ: ನರಹತ್ಯಾ ಯತ್ನ ಪ್ರಕರಣ ದಾಖಲು

ಕಾಸರಗೋಡು: ಹಿತ್ತಿಲಿಗೆ ಅಕ್ರಮವಾಗಿ ನುಗ್ಗಿ ಕಲ್ಲೆಸೆದು ಮಹಿಳೆಗೆ ಗಾಯ ಉಂಟುಮಾಡಿದ ಘಟನೆ ನಗರದ ಚೆನ್ನಿಕ್ಕೆರೆಯಲ್ಲಿ ನಡೆದಿದೆ. ಚೆನ್ನಿಕ್ಕೆರೆಯ ಕುಂಞಿಕಣ್ಣನ್ ಎಂಬವರ ಪತ್ನಿ ದೇವಿ ಆರ್ (70) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಚೆನ್ನಿಕ್ಕೆರೆ ನಿವಾಸಿ ಮಣಿ ಎಂಬಾತನ ವಿರುದ್ಧ ಕಾಸರಗೋಡು ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಅಕ್ಟೋಬರ್ ೧೭ರಂದು ಸಂಜೆ ಆರೋಪಿ ಮಣಿ ತನ್ನ ಮನೆ ಹಿತ್ತಿಲಿಗೆ ಅಕ್ರಮವಾಗಿ ನುಗ್ಗಿ ಬಂದು ಬೆದರಿಕೆಯೊಡ್ಡಿ ತನ್ನ ತಲೆಗೆ ಕಲ್ಲೆಸೆದು ಗಾಯಗೊಳಿಸಿದ್ದನೆಂದೂ ಪೊಲೀಸರಿಗೆ ನೀಡಿದ ದೂರಿನಲ್ಲಿ ದೇವಿ ಆರೋಪಿ ಸಿದ್ದಾರೆ.  ಗಾಯಗೊಂಡ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

You cannot copy contents of this page