ಮಾಜಿ ಪಂ.ಸದಸ್ಯನ ಮನೆ ಮೇಲೆ ಗುಡ್ಡೆ ಕುಸಿತ

ಪೈವಳಿಕೆ: ನಿನ್ನೆ ಸುರಿದ  ಗಾಳಿ ಮಳೆಗೆ ಮನೆಯೊಂದರ ಮೇಲೆ ಸಮೀಪದ ಗುಡ್ಡೆ ಕುಸಿದು ಹಾನಿ ಉಂಟಾದ ಘಟನೆ ಬಾಯಾರು ಸಜಂಕಿಲದಲ್ಲಿ ನಡೆದಿದೆ. ಮಾಜಿ ಪಂಚಾಯತ್ ಸದಸ್ಯ ಸಜಂಕಿಲದ ಐತ್ತಪ್ಪರ ಮನೆ ಮೇಲೆ ಗುಡ್ಡೆ ಕುಸಿದಿದೆ. ಇದರಿಂದ ಹೆಂಚಿನ ಮನೆಯ ಅಡುಗೆ ಕೋಣೆ ಭಾಗ ಹಾನಿಗೀಡಾಗಿದೆ. ಗುಡ್ಡೆ ಕುಸಿಯುವ ಶಬ್ದ ಕೇಳಿ ಮನೆಯವರು ಹೊರಗೆ ಓಡಿದುದರಿಂದ ಅಪಾಯ ತಪ್ಪಿದೆ. ಘಟನೆ ಸ್ಥಳಕ್ಕೆ ಬಾಯಾರು ಗ್ರಾಮಾಧಿಕಾರಿ ಭೇಟಿ ನೀಡಿದರು.

You cannot copy contents of this page