ಕೇರಳದಲ್ಲಿ ಎಡರಂಗ ಅಪ್ರಸಕ್ತವಾಗುವ ಕಾಲ ಸನ್ನಿಹಿತ- ಮಹಾರಾಷ್ಟ್ರ ಶಾಸಕ

ಕಾಸರಗೋಡು: ಈ ವಿಧಾನಸಭಾ ಚುನಾವಣೆಯೊಂದಿಗೆ ಕೇರಳದಲ್ಲೂ ಎಡರಂಗ ಅಪ್ರಸಕ್ತವಾಗಲಿದೆ ಎಂದು ಮಹಾರಾಷ್ಟ್ರದ ಪನ್ವೇಲ್ ಶಾಸಕ ಪ್ರಶಾಂತ್ ಠಾಕೂರ್ ನುಡಿದರು. ಕಾಸರಗೋಡು ಮಂಡಲ ಸಮಿತಿ ಬೂತ್ ಇನ್‌ಚಾರ್ಜ್‌ಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಮಹಾರಾಷ್ಟ್ರದ ಕಮ್ಯೂನಿಸ್ಟ್ ಕುಟುಂಬದಲ್ಲಿ ನಾನು ಜನಿಸಿದ್ದು, 2004ರಲ್ಲಿ ಬಿಜೆಪಿ ಶಾಸಕನಾದ ಬಳಿಕ ಹಿಂತಿರುಗಿ ನೋಡುವಾಗ ಮಹಾರಾಷ್ಟ್ರದಲ್ಲಿ ಕಮ್ಯೂನಿಸ್ಟ್ ಪಕ್ಷಗಳು ಪೂರ್ಣವಾಗಿ ಅಪ್ರಸಕ್ತ ವಾಗಿದೆ ಎಂದು ಅವರು ನುಡಿದರು.

ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಸುಧಾಮ ಗೋಸಾಡ, ಪನ್ವೇಲ್ ನಗರಸಭಾ ಕಾರ್ಪೊರೇಶನ್ ಕೌನ್ಸಿಲರ್ ಸಂತೋಷ್ ಜಿ. ಶೆಟ್ಟಿ, ಪಿ. ರಮೇಶ್, ಸುಕುಮಾರ ಕುದ್ರೆಪ್ಪಾಡಿ, ಚಂದ್ರಶೇಖರ ಬಿ. ಮಾತನಾಡಿದರು.

RELATED NEWS

You cannot copy contents of this page